ಮಾಸಣಗಿ ನೇಮಕ


ಬ್ಯಾಡಗಿ,ಎ.23: ಭ್ರಷ್ಟಾಚಾರ ವಿರೋಧಿ ಜನಾಂದೋಲನ ನ್ಯಾಸ ಮಹಿಳಾ ಘಟಕದ ತಾಲೂಕಿನ ಮುಖ್ಯ ಸಂಚಾಲಕರಾಗಿ ಪಟ್ಟಣದ ಶೈಲಾ ಪಿ ಮಾಸಣಗಿ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತು ಶೈಲಾ ಮಾಸಣಗಿ ಅವರಿಗೆ ನೇಮಕಾತಿ ಆದೇಶವನ್ನು ನೀಡಿರುವ ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ಫರೀದಾಭಾನು ನದ್ದಿಮುಲ್ಲಾ ಅವರು, ಅಣ್ಣಾ ಹಜಾರೆಯವರ ಆದರ್ಶ, ತತ್ವಗಳಿಗೆ ಅನುಗುಣವಾಗಿ ನಿಸ್ವಾರ್ಥ ಮನೋಭಾವನೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಲು ಮುಂದಾಗಬೇಕು ಎಂದು ಸೂಚಿಸಿದ್ದಾರೆ.