ಮಾಶಾಳದಲ್ಲಿ ಅನುರಣಿಸಿದ ಚೌಡೇಶ್ವರಿ ಜಾತ್ರೆ ಸಂಭ್ರಮ

ಅಫಜಲಪುರ: ಮೇ.27:ತಾಲೂಕಿನ ಮಾಶಾಳ ಗ್ರಾಮದ ಚೌಡೇಶ್ವರಿ ಜಾತ್ರಾ ಮಹೋತ್ಸವ ಅಂಗವಾಗಿ ಚೌಡೇಶ್ವರಿ ದೇವಿಯ ಶೂಲ ಮುಟ್ಟುವ ಕಾರ್ಯಕ್ರಮ ಸಹಸ್ರಾರು ಭಕ್ತರ ಮಧ್ಯೆ ಸಂಭ್ರಮದಿಂದ ಜರುಗಿತು.

ಶೂಲ ಮುಟ್ಟುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಮತ್ತು ಮಹಾರಾಷ್ಟ್ರ ಗಡಿಭಾಗದ ಅಸಂಖ್ಯಾತ ಭಕ್ತರು ಸೇರಿದ್ದರು. ಭಕ್ತ ನರಸಿಂಗಪ್ಪ ಪೂಜಾರಿ ಚೌಡೇಶ್ವರಿ ದೇವಿಯ ಮೂರ್ತಿ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಸಂಚರಿಸಿದರು. ಈ ವೇಳೆ ಪ್ರತಿ ಮನೆಯ ಭಕ್ತಾದಿಗಳು ಚೌಡೇಶ್ವರಿ ದೇವಿಗೆ ದಂಡಿ, ಹಾರ ತುರಾಯಿ, ಕಾಯಿ ಕರ್ಪೂರ, ಆರತಿ ಬೆಳಗಿ ದರ್ಶನ ಪಡೆದರು. ಮೆರವಣಿಗೆ ನಂತರ ಮೂರ್ತಿಯನ್ನು ಚಪ್ಪದ ಕಟ್ಟೆಗೆ ತರಲಾಯಿತು.

ಶೂಲ ಮುಟ್ಟುವ ಕಾರ್ಯಕ್ರಮದ ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.