ಮಾವು ಮಲ್ಲಿಗೆ ಲೋಕಾರ್ಪಣೆ

ಕಲಬುರಗಿ:ಫೆ.27: ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜರುಗಿದ ಕಲಬುರಗಿ ಜಿಲ್ಲಾ 20 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಡಿನ ಪ್ರಮುಖ ಕವಿ ಸಿ.ಎಸ್. ಆನಂದ ಅವರ ಮಾವು ಮಲ್ಲಿಗೆ ದ್ವಿಪದಿಗಳ ಸಂಕಲನವನ್ನು ನಾಡಿನ ಪ್ರಸಿದ್ಧ ಸಾಹಿತಿಗಳಾದ ಪ್ರೊ.ರಾಜಪ್ಪ ದಳವಾಯಿ ಅವರು ಲೋಕಾರ್ಪಣೆಗೊಳಿಸಿದರು.
ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರಾದ ಡಾ.ಟಿ.ಎಂ.ಭಾಸ್ಕರ್, ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪಾ, ಡಾ.ಸತೀಶಕುಮಾರ ಹೊಸಮನಿ, ವಿಜಯಕುಮಾರ ಪಾಟೀಲ , ತೇಗಲತಿಪ್ಪಿ, ಡಾ. ಕಲ್ಯಾಣರಾವ ಪಾಟೀಲ , ಶಿವರಾಜ ಅಂಡಗಿ ಮತ್ತು ಕಲ್ಯಾಣಕುಮಾರ ಶೀಲವಂತ ಉಪಸ್ಥಿತರಿದ್ದರು.