ಮಾವು ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆ ಜಾರಿ

ಚಿಕ್ಕಬಳ್ಳಾಪುರ, ಜ.೮-ಪ್ರಸ್ತುತ ಮಾವು ಬೆಳೆಯ ಅಭಿವೃದ್ಧಿ ಗಾಗಿ ಮಾವು ಅಭಿವೃದ್ಧಿ ನಿಗಮವು ವಿವಿಧ ಯೋಜನೆಗಳನ್ನು ಅನು ಷ್ಠಾನಗೊಳಿಸುತ್ತಿದೆ. ಮಾವು ಬೆಳೆಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದ್ದು ರಪ್ತು ಮಾಡಲು ಹೆಚ್ಚು ಒತ್ತು ನೀಡ ಲಾಗುತ್ತಿದೆ ಎಂದು ಮಾವು ನಿಗ ಮದ ಅಧ್ಯಕ್ಷರಾದ ಕೆ.ವಿ ನಾಗರಾಜ್ ರವರು ತಿಳಿಸಿದರು.
ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಕೋಲಾರ ಹಾಗೂ ಮಾವು ಅಭಿವೃದ್ಧಿ ಕೇಂದ್ರ, ಮಾಡಿಕೆರೆ, ಚಿಂತಾಮಣಿ ರವರ ಸಂಯುಕ್ತ ಆಶ್ರಯದಲ್ಲಿ ಆತ್ಮ ನಿರ್ಭರ ಯೋಜನೆಯಡಿ ಸ್ವಸ ಹಾಯ ಗುಂಪುಗಳ ಮಹಿಳೆಯ ರಿಗೆ ಹೂಗಳ ಜೋಡಣೆ, ಮಾವು ಮತ್ತು ಇತರೆ ಹಣ್ಣು, ತರಕಾರಿಗಳ ಸಂಸ್ಕರಣೆ ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾವು ಹಣ್ಣಾದ ನಂತರ ಹೆಚ್ಚು ಕಾಲ ಶೇಖರಣೆ ಮಾಡ ಲಾಗದ ಕಾರಣ ಮಾವು ಹಂಗಾ ಮಿನಲ್ಲಿ ಹೆಚ್ಚಾದ ಹಣ್ಣುಗಳನ್ನು ಸಂಸ್ಕರಣೆ ಮಾಡಿ ಇತರೆ ಋತು ಗಳಲ್ಲಿ ಮಾವಿನ ಸವಿ ಸವಿಯ ಬಹುದು ಹಾಗೂ ಹೆಚ್ಚಿನ ಆದಾಯ ಗಳಿಸಬಹುದಾಗಿದೆ. ಸಂಸ್ಕರಣೆ ಮಾಡಲು ಬೇಕಾಗಿರುವ ಯಂತ್ರಗಳನ್ನು ಮಾವು ಅಭಿವೃದ್ಧಿ ಕೇಂದ್ರ, ಮಾಡಿಕೆರೆ, ಚಿಂತಾಮಣಿ ಇಲ್ಲಿ ಅಳವಡಿಸಲಾಗಿದ್ದು ಸ್ವಸಹಾಯ ಗುಂಪುಗಳು ಮತ್ತು ಮಹಿಳೆಯರು ಇದರ ಉಪಯೋಗ ಪಡೆದುಕೊಳ್ಳಲು ತಿಳಿಸಿದರು.
ಪ್ರಸಕ್ತ ಮಾವು ಹಂಗಾಮು ಪ್ರಾರಂಭವಾಗಿದ್ದು, ಮಾವು ಬೆಳೆಯುವ ಜಿಲ್ಲೆಗಳಲ್ಲಿ ಹೂತೆನೆ ಹೊರಹೊಮ್ಮಿದ್ದು, ಕೆಲವು ಜಿಲ್ಲೆಗಳಲ್ಲಿ ಕಾಯಿ ಸಹ ಕಚ್ಚಿರುತ್ತದೆ. ಇದಕ್ಕೆ ಪೂರಕವಾಗಿ ಈಗಾಗಲೇ ಕೈಗೊಳ್ಳಬೇಕಾದ ಅಗತ್ಯ ಸಸ್ಯ ಸಂರಕ್ಷಣಾ ಕ್ರಮಗಳ ಬಗ್ಗೆ ಮಾಹಿತಿ ಕರಪತ್ರಗಳನ್ನು ಸಿದ್ಧಪಡಿಸಿ ಮಾವು ಬೆಳೆಯುವ ಜಿಲ್ಲೆಗಳಿಗೆ ಕಳುಹಿಸಿ ಕೊಡಲಾಗಿದೆ. ಶಿಫಾರಸ್ಸಿನಂತೆ ಮಾವು ಬೆಳೆಗಾರರು ಮೊದಲನೆ/ ಎರಡನೆ ಸಿಂಪಡಣೆಯನ್ನು ಕೈಗೊಂಡಿರುತ್ತಾರೆ. ಆದರೆ ಪ್ರಕೃತಿ ವಿಕೋಪದಿಂದಾಗಿ ಪ್ರಸ್ತುತ ರಾಜ್ಯಾ ದ್ಯಂತ ಮೋಡಕವಿದ ವಾತಾವರಣ ವಿದ್ದು ಮತ್ತು ತುಂತುರು ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಈ ವಾತಾವರಣದಿಂದಾಗಿ ಸಂಭ ನೀಯ ಹೂತೆನೆ ಕಪ್ಪಾಗುವ/ ಒಣಗುವ ಮತ್ತು ಬೂದಿರೋಗ ಗಳನ್ನು ತಡೆಗಟ್ಟಲು ಹಾಗೂ ಹೂಗಳನ್ನು ಸಂರಕ್ಷಿಸಿಕೊಳ್ಳಲು ಮಾವು ಬೆಳೆಗಾರರು ತಪ್ಪದೇ ಕೂಡಲೇ ಶೀಲಿಂದ್ರನಾಶಕ ಹೆಕ್ಸಾ ಕೋನ್‌ಜೋಲ್ (5% EC) 2 ಮಿ.ಲೀ ಅಥವಾ
ಥಯೋಫಿನೆಟ್ ಮಿಥೈಲ್ (70% WP) 1 ಗ್ರಾಂ ಅಥವಾ ಕಾರ್ಬಂಡಾಜಿಮ್ (50% WP) 1.5 ಗ್ರಾಂ ಅಥವಾ ಟ್ರೈಸೈಕ್ಲೋಜೋಲ್ (75% WP )0.25 ಗ್ರಾಂ, ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆಯನ್ನು ಕೈಗೊಳ್ಳಬೇಕಾಗಿ ತಿಳಿಸಿದರು.
ಬೆಂಗಳೂರು ವಿಭಾಗದ ತೋಟ ಗಾರಿಕೆ ಜಂಟಿ ನಿರ್ದೇಶಕ ಎಂ. ವಿಶ್ವನಾಥ್ ಮಾತನಾಡಿ, ಮಹಿಳೆಯರಿಗೆ ಈ ತರಬೇತಿಯಲ್ಲಿ ನೀಡುವ ಮಾಹಿತಿಯು ಹೆಚ್ಚು ಅನುಕೂಲವಾಗುವುದು ಹಾಗೂ ಇದರಿಂದ ತಮ್ಮ ಆರ್ಥಿಕ ಸ್ಥಿತಿ ಹೆಚ್ಚಿಸಿಕೊಳ್ಳಲು ತಿಳಿಸಿದರು.
ಕೋಲಾರ, ಟಮಕ, ತೋಟ ಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ರಾಜೇಶ್‌ರವರು ಮಾತನಾಡಿ, ಮಹಿಳೆ ಯರಿಗೆ ಹೂದಾನಿ ಜೋಡಣೆ ಕುರಿತು ಪ್ರಾತ್ಯಕ್ಷತೆ ನೀಡಿದರು. ಮಾವು ಅಭಿವೃದ್ಧಿ ಕೇಂದ್ರದ ಸಹಾಯಕ ತೋಟಗಾರಿಕೆ ನಿರ್ದೇ ಕ ಶ್ರೀಮತಿ ರಮಾದೇವಿ ಮತ್ತು ಶ್ರೀಮತಿ ಗೀತಾ. ಬಿ.ಆರ್ ರವರು ಮಾಂಗ್ಯೋ ಬಾರ್, ಟೋಮ್ಯಾ ಟೋ ಸಾಸ್, ಆಮ್ಲ ಮುರಬ್ಬ ಮತ್ತು ಜಾಮ್ ಮಾಡುವು ಕುರಿತು ಪ್ರಾತ್ಯಕ್ಷತೆ ನೀಡಲಾಯಿತು.
ಈ ಸಂದರ್ಭದಲ್ಲಿ ಚಿಂತಾಮಣಿ ಮಾವು ಅಭಿವೃದ್ಧಿ ಕೇಂದ್ರದ ತೋಟಗಾರಿಕೆ ಉಪ ನಿರ್ದೇಶಕ ಎಸ್.ಆರ್ ಕುಮಾರ ಸ್ವಾಮಿ, ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದ ತೋಟಗಾರಿಕೆ ಉಪ ನಿರ್ದೇಶಕ ಬಾಲಕೃಷ್ಣ, ಕೋಲಾರ ಜಿಲ್ಲೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರವಿ ಕುಮಾರ್ ರವರು ಭಾಗವಹಿಸಿದರು.