ಮಾವಿನ ಹಣ್ಣು ನೇರ ಮಾರುಕಟ್ಟೆ ಅರಿವು ಕಾರ್ಯಕ್ರಮ

ಬೆಂಗಳೂರು,ಮೇ.೨೨-ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಹಾಗೂ ಶ್ರೀನಿವಾಸಪುರ ಮಾವಿನಹಣ್ಣು ಬೆಳೆಗಾರರ ಸಹಯೋಗದೊಂದಿಗೆ ಜಿಕೆವಿಕೆ ಆವರಣದಲ್ಲಿ ನೇರ ಮಾರುಕಟ್ಟೆಯ ಉಪಯುಕ್ತತೆ ಬಗ್ಗೆ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು
ಮಾವಿನಹಣ್ಣಿನ ನೇರ ಮಾರುಕಟ್ಟೆ ಅರಿವು ಕಾರ್ಯಕ್ರಮವನ್ನು ಕೃಷಿ ವಿಶ್ವವಿದ್ಯಾನಿಲಯ ಕುಲಪತಿ ಡಾ.ಎಸ್.ವಿ. ಸುರೇಶ ಉದ್ಘಾಟಿಸಿದರು. ನಂತರ ಮಾತನಾಡಿ ಪ್ರಸ್ತುತ ಪರಿಸ್ಥಿತಿಯಲ್ಲಿ ರೈತರು ಬೆಳೆದ ಉತ್ಪನ್ನಗಳಿಗೆ ಮಧ್ಯವರ್ತಿಗಳ ಆವಳಿಯಿಂದಾಗಿ ಸಮರ್ಪಕವಾದ ಬೆಲೆ ಸಿಗುತ್ತಿಲ್ಲ, ಆದುದರಿಂದ ರೈತರು ಸಂಘಟಿತರಾಗಿ ಬೆಳೆಗಾರರ ಸಂಘಗಳ ಮೂಲಕ ತಾವು ಬೆಳೆದ ಹಣ್ಣು ಹಾಗೂ ತರಕಾರಿ ಮತ್ತು ಇತರೆ ಪದಾರ್ಥಗಳನ್ನು ನೇರ ಮಾರುಕಟ್ಟೆ ಮಾಡುವುದರಿಂದ ಮಧ್ಯವರ್ತಿಗಳಲ್ಲದೆ ರೈತರಿಂದ ನೇರವಾಗಿ ಗ್ರಾಹಕರಿಗೆ ಹಣ್ಣುಗಳು ಮಾರುಕಟ್ಟೆ ದರಕ್ಕಿಂತ ಕಡಿಮೆ. ದರದಲ್ಲಿ, ತಾಜಾವಾಗಿ ಸಿಗುವುದರಿಂದ ರೈತರಿಗೆ ಮತ್ತು ಬಳಕೆದಾರರಿಗೆ ಅನುಕೂಲವಾಗುತ್ತದೆ. ಕೃಷಿ ವಿಶ್ವವಿದ್ಯಾನಿಲಯದ ಒಡಗೂಡಿ ಮಾರುಕಟ್ಟೆಯಲ್ಲಿ ರೈತರ ಪ್ರಾಮುಖ್ಯತೆಯನ್ನು ಹೆಚ್ಚಿಸಲು ನೇರ ಮಾರುಕಟ್ಟೆಯು ಉತ್ತಮ ಮಾರ್ಗವಾಗಿದೆ ಎಂದು ತಿಳಿಸಿದರು.
ಶ್ರೀನಿವಾಸಪುರ ರೈತ ಉತ್ಪಾದಕ ಸಂಘವು ೧೦ ಟನ್ ಶೇಕರಣಾ ಸಾಮರ್ಥ್ಯದ ಘಟಕ, ಸ್ಟ್ಯಾಂಡಿಂಗ್, ಪ್ಯಾಕಿಂಗ್, ಲೇಬಲಿಂಗ್ ಮತ್ತು ನೈಸರ್ಗಿಕವಾಗಿ ಹಣ್ಣುಮಾಡುವಿಕೆ ಹೀಗೆ ಹಲವು ಸೇವೆಗಳನ್ನು ಬೆಳೆಗಾರರಿಗೆ ಒದಗಿಸುವ ಮೂಲಕ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನ ಪಡೆದುಕೊಂಡಿದೆ. ಜಿಕೆವಿಕೆಯ ಆವರಣದಲ್ಲಿ ನೇರ ಮಾರಾಟ ಮಾಡುಲು ಅವಕಾಶ ಕಲ್ಪಿಸುವುದರ ಮುಖಾಂತರ ಕೃಷಿ ವಿಶ್ವವಿದ್ಯಾನಿಲಯ ರೈತಬಾಂಧವರಿಗೆ ಅನುಕೂಲ ಕಲ್ಪಿಸಿ ಮಾದರಿಯಾಗಿದ್ದಾರೆ ಎಂದು ಸ್ಥಾಪಕ ಮುಖಂಡ ಎಚ್.ಎಸ್. ರವಿಪ್ರಕಾಶ್ ರೆಡ್ಡಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಸಂಶೋಧಕ ಈ ಸಿದ್ದಯ್ಯ, ಪ್ರಾಧ್ಯಾಪಕರು, ಮುಖ್ಯ ವಿಜ್ಞಾನ ಅಧಿಕಾರಿ ಡಾ. ಹೆಚ್ ಆಶೋಕ್ ಮತ್ತು ನಿವೃತ್ತ ಪ್ರಾಧ್ಯಾಪಕ ಡಾ. ವೆಂಕಟರೆಡ್ಡಿ, ಕೆ.ಶಿವರಾಮು ಉಪಸ್ಥಿತರಿದ್ದರು.