ಮಾವಿನ ಹಣ್ಣಿನ ಜ್ಯೂಸ್

ಬೇಸಿಗೆ ಹಣ್ಣುಗಳ ರಾಜ ಮಾವು ತನ್ನ ರುಚಿಯನ್ನು ತೋರಿಸುವ ಕಾಲ. ಇನ್ನು ಮಾವಿನ ಹಣ್ಣಿನ ರುಚಿ ಮಾತ್ರ ಸವಿದರೆ ಸಾಕೆ? ಅದರ ಜೊತೆಗೆ ಆ ಹಣ್ಣಿನ ರಸವನ್ನು ಸೇವಿಸಿದಾಗ ತಾನೆ ಅದರ ರುಚಿ ತಿಳಿಯುವುದು ಬೇಡವೇ.
ಅಗತ್ಯವಾದ ಪದಾರ್ಥಗಳು
೨ ಹಣ್ಣಾದ ಮಾವಿನಹಣ್ಣುಗಳು
೧ ಕಪ್ ನೀರು
೨ ಟೀ ಚಮಚ ಸಕ್ಕರೆ
ಒಂದಿಷ್ಟು ಐಸ್ ಕ್ಯೂಬ್‌ಗಳು
ಮಾಡುವ ವಿಧಾನ
ಮಾವಿನ ಹಣ್ಣುಗಳ ಸಿಪ್ಪೆಯನ್ನು ತೆಗೆಯಿರಿ. ಇದನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ. ಮಾವು, ಐಸ್, ನೀರು ಮತ್ತು ಸಕ್ಕರೆ ಎಲ್ಲವನ್ನೂ ಮಿಕ್ಸಿನಲ್ಲಿ ಹಾಕಿ. ಚೆನ್ನಾಗಿ ರುಬ್ಬಿಕೊಳ್ಳಿ.
ನಂತರ ಇದನ್ನು ಶೋಧಿಸಿಕೊಳ್ಳಿ. ಉಳಿದ ಸಿಪ್ಪೆಗಳನ್ನು ಮತ್ತು ನಾರನ್ನು ತೆಗೆದು ದೂರವಿಡಿ. ಈ ಜ್ಯೂಸನ್ನು ಗ್ಲಾಸುಗಳಲ್ಲಿ, ಅಲಂಕಾರಕ್ಕಾಗಿ ಒಂದು ತುಂಡು ಮಾವಿನ ಹಣ್ಣನ್ನು ಸಿಕ್ಕಿಸಿ ಸರ್ವ್ ಮಾಡಿ.