ಮಾವಿನ ಸುರಕ್ಷಿತ ಕಟಾವು ಮತ್ತು ರಾಸಾಯನಿಕ ಮುಕ್ತ ಪಕ್ವತೆ ವಿಧಾನ

ಕಲಬುರಗಿ ಏ 27:ಮಾವು ಹಣ್ಣುಗಳ ರಾಜ ಎಂದೇ ಪ್ರಖ್ಯಾತವಾಗಿರುವ ಹಣ್ಣು.ಬೇಸಿಗೆಯಲ್ಲಿ ಅತೀ ಹೆಚ್ಚಾಗಿ ಬಳಕೆ ಮಾಡುವ ಹಣ್ಣು. ಇದರಲ್ಲಿವಿಟಾಮಿನ್ ಎ ಮತ್ತು ವಿಟಾಮಿನ್ ಸಿ ಹೆಚ್ಚಾಗಿದ್ದು ಇದನ್ನುಸೇವಿಸುವುದರಿಂದ ದೇಹದ ಉಷ್ಣತೆ ಕಡಿಮೆ ಮಾಡಿ ಒಳ್ಳೆ ಆರೊಗ್ಯಕಾಪಾಡಿಕೊಳ್ಳು ಪ್ರಮುಖ ಕಾರಣವಾಗಿದೆ. ಪ್ರತಿ ಗಿಡದಲ್ಲಿ ಉತ್ತಮಕಾಯಿಕಟ್ಟಿ ಹಣ್ಣಾದರು ಕೊಯ್ಲು ಹಂತದಲ್ಲಿ ಉತ್ತಮ ಕಟಾವುಮಾಡುವ ಮತ್ತು ಪಕ್ವತೆಯ ವಿಧಾನವನ್ನುಅನುಸರಿಸುವುದರಿಂದ ಉತ್ತಮ ಗುಣಮಟ್ಟದ ಹಣ್ಣುಗಳ ಇಳುವರಿಪಡೆಯಬಹುದು. ಆದ್ದರಿಂದ ಐ.ಐ.ಹೆಚ್.ಆರ್ ಬೆಂಗಳೂರು ಅಭಿವೃದ್ಧಿಪಡಿಸಿದ ಮ್ಯಾಂಗೋ ಹಾರ್ವೆಸ್ಟರ್ ಮತ್ತು ಮನೆಯಲ್ಲೇ ಸಾವಯವಪದ್ಧತಿಯಲ್ಲಿ ಹಣ್ಣುಗಳನ್ನು ಪಕ್ವತೆ ಮಾಡಬಹುದು. ಇದು ಮಾವು ಬೆಳೆಗಾರರಿಗೆ ವರದಾನವಾಗಿದೆ.
ಮ್ಯಾಂಗೋ ಹಾರ್ವೆಸ್ಟರ್ ಉಪಯೋಗಗಳು:
1 ಗಾಳಿ, ಬಿಸಿಲು ಸನ್ನಿವೇಶದಲ್ಲೂ ಸುರಕ್ಷಿತವಾಗಿ ಕಟಾವು.2 ಕಡಿಮೆ ಕೌಶಲ್ಯದಿಂದ ಉತ್ತಮ ಕೆಲಸ
3ಮಾವು ನೆಲಕ್ಕೆ ಬಿದ್ದು ಕೀಟ, ರೋಗ ಬಾರದಂತೆ ತಡೆ.4 ಹಣ್ಣಿನಲ್ಲಿರುವ ಪೋಷಕಾಂಶ ಸುರಕ್ಷಿತ
5 ತೊಗಟೆಯ ಅಂಟು ದ್ರವ ಸ್ರಾವಿಸುವಿಕೆ ಕಡಿಮೆ.6 ಕೆಲಸಗಾರರು ಕಡಿಮೆ ಶಕ್ತಿ ಬಳಸದಿದ್ದರು, ಕೋಲ್
ಮೂಲಕ ಕಟಾವು ಸಾಧ್ಯ.7 ಸುರಕ್ಷಿತ ಪ್ಯಾಕಿಂಗ್ ಮತ್ತು ಸಾಗಾಟ ಅನುಕೂಲ.
ಹಣ್ಣು ಪಕ್ವತೆ ವಿಧಾನ:
ಮಾವು ಕಟಾವಿನ ನಂತರ ರಸಾಯನಿಕ ಬಳಸದೇಮನೆಯಲ್ಲೇ ಹಣ್ಣನ್ನು ಮಾಗಿಸಿ ಮಾರಾಟ ಮಾಡಬಹುದು. ಇದರಿಂದರಾಸಾಯನಿಕ ಮುಕ್ತ ಹಣ್ಣನ್ನು ತಿನ್ನಬಹುದಾಗಿದೆ. ನಿರ್ದಿಷ್ಟಅಳತೆಯ (1.2 mಣ x 1.2 mಣ x 1.2 mಣ) (2m 2 ) 3 ಅಡಿ (3×5) ಗಾತ್ರಪ್ಲಾಸ್ಟಿಕ್ ಬಳಸಿ ಚೌಕಾಕಾರ ಅಥವಾ ಆಯತಾಕಾರದಲ್ಲಿ ಬಾಕ್ಸ್ ರೀತಿ ಮಾಡಿಟ್ರೆಗಳಲ್ಲಿ ಹಣ್ಣುಗಳನ್ನು ಸುರಕ್ಷಿತವಾಗಿ ತುಂಬಿ ಗಾಳಿಯಾಡದಂತೆ ಬಿಗಿಯಾಗಿ ಕಟ್ಟುವುದು. ಕೇವಲ 3-4 ದಿನಗಳಲ್ಲಿಹಣ್ಣು ಮಾಗಿ ತಿನ್ನಲು ಯೋಗ್ಯವಾಗಿರುತ್ತದೆ. ಮನೆಯಲ್ಲೇಹಣ್ಣುಗಳನ್ನು ಮಾಗಿಸಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು
ಎಂದು ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯ ತೋಟಗಾರಿಕೆ ವಿಜ್ಞಾನಿ ಡಾ. ವಾಸುದೇವ ನಾಯ್ಕ ತಿಳಿಸಿದ್ದಾರೆ.