ಮಾವಿನ ಕೆರೆ ಹೂಳೆತ್ತುವ ಕಾರ್ಯ ಸ್ಥಗಿತ

ರಾಯಚೂರು.ಜು.೧೧-ಐತಿಹಾಸಿಕ ಮಾವಿನ ಕೆರೆಯ ವತ್ತುವರಿಯನ್ನು ಸಮಗ್ರ ಮಾಹಿತಿ ನೀಡುವವರೆಗೆ ಕೆರೆಯ ಹೂಳೆತ್ತುವ ಕಾರ್ಯವನ್ನು ಜಿಲ್ಲಾ ಜನತಾ ದಳ ನಿಲ್ಲಿಸಿದೆ.
ನಿನ್ನೆ ಜಿಲ್ಲಾ ಜನತಾದಳದ ವತಿಯಿಂದ ಸುದ್ದಿಗೋಷ್ಠಿಯನ್ನು ಅಮ್ಮಿಕೊಂಡಿದ್ದು ಇತಿಹಾಸಿಕ ಮಾವಿನ ಕೆರೆಯನ್ನು ಕೆಲವು ಭೂಗಳ್ಳರು ಕೆರೆಯನ್ನು ಒತ್ತುವರಿ ಮಾಡಿದ್ದಾರೆ ಎಂದು ಹೇಳಾಲಾಗಿತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ, ನಗರಸಭೆ,ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಶಾಸಕರಿಗೆ ಕೂಡಲೇ ಹೂಳೆತ್ತುವ ಕಾರ್ಯ ಸ್ಥಗಿತ ಮಾಡಬೇಕು ಎಂದು ಸೂಚಿಸಲಾಗಿತ್ತು ಅದರಿಂದ ಇಂದು ಬಿಜೆಎಸ್ ಹಾಗೂ ಶಿಲ್ಪ ಪೌಂಡೇಶನ್ ಮಾಹಿತಿ ನೀಡಿ ಕಾರ್ಯವನ್ನು ಸ್ಥಗಿತ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ,ವಿಶ್ವನಾಥ ಪಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.