ಮಾವಿನ ಕೆರೆಯಲ್ಲಿ ಈಜಲು ಹೋಗಿದ್ದ ಹುಡುಗ ಸಾವು

ರಾಯಚೂರು :ಏ 08
ನಗರದ ಐ ಡಿ ಎಸ್ ಎಂ ಟಿ ಲೇಔಟ್ ನ ಹತ್ತಿರ ಮಾವಿನ ಕೆರೆಯಲ್ಲಿ ಮೂರು ದಿನಗಳ ಹಿಂದೆ ಈಜಲು ಹೋಗಿದ ಮುಸ್ಲಿಂ ಹುಡುಗ ತನ್ನ ತಲೆ ಕೈಗಳು ಕೆಳಗಡೆ ಮಾಡಿ ಮಣ್ಣಿನ ಹೋಳುನಲ್ಲಿ ಸಿಕ್ಕಿಕೊಂಡು ಮೃತಪಟ್ಟಿರುತ್ತಾನೆ.

ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆಯವರು ಹಾಗೂ ನಗರ ಶಾಸಕರು ಮಾವಿನ ಕೆರೆಯಲ್ಲಿ ಪೂಜೆಯನ್ನು ಮಾಡಿ ಮಾವಿನ ಕೆರೆಯ ಹೋಳನ್ನು ಎತ್ತಿ ಹೊರಗಡೆ ಹಾಕಿ ಸುಮಾರು ಆರು ಏಳು ಫೀಟ್ ಒಳಗಡೆ ತೋಡಿರುವುದರಿಂದ ಮಕ್ಕಳು ಪ್ರತಿನಿತ್ಯ ಮಾವಿನಕೆರೆಯಲ್ಲಿ ಈಜಲು ಬರುತ್ತಿದ್ದು ಇದನ್ನು ನೋಡಿದ ಪೊಲೀಸರು ಹುಡುಗರನ್ನು ಓಡಾಡಿಸಿದರೆ ಇನ್ನೊಂದು ಕಡೆ ಮತ್ತೆ ಅದೇ ಹುಡುಗರು ಬಂದು ಈಜಾಡಲು ಅರಸಾಹಸ ಪಡುತ್ತಿದ್ದರು.

ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆ ಸರಿಯಾಗಿ ಕೆಲಸ ನಿಭಾಯಿಸದೆ ಇರುವುದರಿಂದ ಈ ಸಾವಿಗೆ ನೇರ ಹೊಣೆಗಾರರಾಗಿರುತ್ತಾರೆ ಎಂದು ಸ್ಥಳೀಯರು ಅಗ್ರಹಿಸಿದ್ದಾರೆ.