ಮಾವಿನಕೆರೆ: ನಗರಸಭೆಯಿಂದ ಶೆಡ್ ತೆರವು ಕಾರ್ಯಾಚರಣೆ

ಎಂ.ವಸಂತ ಕುಮಾರ್ ವಿರುದ್ಧ ಟ್ರಸ್ಟ್ ಮುಖ್ಯಸ್ಥರ ನ್ಯಾಯಾಂಗ ನಿಂದನೆ ಪ್ರಕರಣ
ರಾಯಚೂರು.ಜ.೦೮- ನಗರದ ವಾರ್ಡ್ ನಂ.೧೨ ರ ಮಾವಿನಕೆರೆ ವ್ಯಾಪ್ತಿಯ ಸರ್ವೇ ನಂ. ೧೨೩೨ ರಲ್ಲಿ ಹಾಕಲಾಗಿದ್ದ ಶೆಡ್ ಇಂದು ಮುಂಜಾನೆ ನಗರಸಭೆಯಿಂದ ತೆರವುಗೊಳಿಸಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿಗಳಿಗೆ ನಿನ್ನೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಶೆಡ್ ತೆರವು ಕಾರ್ಯಾಚರಣೆ ನಡೆಸಲಾಯಿತು. ಪ್ರಭಾರಿ ಆಯುಕ್ತರಾದ ವೆಂಕಟೇಶ್ ಮತ್ತು ನಗರಸಭೆ ಸಿಬ್ಬಂದಿ ಪೊಲೀಸ್‌ನೊಂದಿಗೆ ಸ್ಥಳಕ್ಕೆ ತೆರಳಿ ಶೆಡ್ ತೆರವುಗೊಳಿಸಲಾಯಿತು. ಕೇವಲ ೨೪ ಗಂಟೆಗಳಲ್ಲಿ ಮಾವಿನಕೆರೆ ಸ್ಥಳ ತೆರವು ಕಾರ್ಯಾಚರಣೆ ನಗರಸಭೆ ಮುಂದಾಗಿರುವುದು ಗಮನಾರ್ಹವಾಗಿದೆ. ಈ ಸ್ಥಳ ಮಾಲೀಕತ್ವದ ಮಹಾಬೋಧಿ ವೃಕ್ಷ ಎಜ್ಯುಕೇಷನ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷರಾದ ಪ್ರಣೇಶ್, ಖಜಾಂಚಿ ಕವಿತಾ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಸ್ಥಳಕ್ಕೆ ಸಂಬಂಧಿಸಿ ಜೆಎಂಎಫ್-೨ ನ್ಯಾಯಾಲಯದ ಆದೇಶದ ಪ್ರತಿಯನ್ನು ನೀಡಲಾಗಿದೆ.
ಐಡಿಎಸ್‌ಎಂಟಿ ಲೇಔಟ್‌ನ ಮುನ್ಸಿಪಾಲ್ ನಂ ೧-೪-೧೨೩೪/೩೮೨/೦೧ ಕ್ಕೆ ಸಂಬಂಧಿಸಿ ೧೯೯೨-೯೩ರಿಂದ ೨೦೨೦-೨೧ ರವೆರೆಗೆ ನಗರಸಭೆಗೆ ಕರಪಾವತಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನೂ ಮಾನ್ಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಒದಗಿಸಿ ಶಾಶ್ವತ ತಡೆಯಾಜ್ಞೆ ನೀಡಲಾಗಿದೆ. ಚಾರಿಟೇಬಲ್ ಟ್ರಸ್ಟ್ ಅಡಿ ಈ ಜಾಗವನ್ನು ಗುರುಕುಲ ಪ್ರಾರಂಭಿಸಲು ಮುಂಜೂರಾತಿ ಪಡೆದಿದ್ದು, ಕೋವೀಡ್ ಹಿನ್ನೆಲೆಯಲ್ಲಿ ಶಾಲಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಈ ಸ್ಥಳಕ್ಕೆ ಸಂಬಂಧಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಂ. ವಸಂತ್ ಸುಳ್ಳು ಆರೋಪ ಮಾಡಿದ್ದಾರೆ. ಇವರು ಸಂಘಟನೆಯು ದಲಿತರ ಮೇಲೆ ದೌರ್ಜನ್ಯ ಮತ್ತು ದಲಿತ ವಿರೋಧಿ ಚಟುವಟಿಕೆ ಮಾಡಲು ಬೈಲಾದಲ್ಲಿ ತಿಳಿಸಲಾಗಿದೆಯೇ? ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ಆದೇಶವನ್ನೇ ನಿಂಧಿಸಿದಂತ ಎಂ.ವಸಂತ್ ಕುಮಾರ್ ಅವರ ವಿರುದ್ಧ ಮಾನಹಾನಿ ಹಾಗೂ ಅತಿಕ್ರಮಣ ಪ್ರವೇಶ ಕಾನೂನಿನಡಿ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಲಾಗುವುದಾಗಿ ಎಚ್ಚರಿಸಿದ್ದಾರೆ.