ಮಾವಿನಕೆರೆ ಜಾಗ ಅನಧಿಕೃತ ನಿರ್ಮಾಣ ಕ್ರಮಕ್ಕೆ ಆಗ್ರಹ

ರಾಯಚೂರು. ಜ.೧೨.ಮಾವಿನಕೆರೆಯ ಪಕ್ಕದಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿರುವ ಟೆಂಟುಗಳನ್ನು ತಕ್ಷಣ ತೆರವುಗೊಳಿಸಿ ಕಾನೂನು ಕ್ರಮ ಜರಗಿಸಬೇಕೆಂದು ಸಿದ್ದಾರ್ಥ ಸೇವಾ ಸಮಿತಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಸ್ಥಾನಿಕ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಮಾವಿನ ಕೆರೆಯ ಸರ್ವೇ ನಂಬರ್೧೨೩೨ ರಲ್ಲಿ ಅನಧಿಕೃತವಾಗಿ ಗುಡಿಸಲು ಟೆಂಟ್ ಗಳನ್ನು ನಿರ್ಮಿಸಿ ನಗರಸಭೆಯಿಂದ ಓ ಎಲ್ ಎಂದು ತೋರಿಸಿ ಕೆರೆಯ ಜಾಗವನ್ನು ಪ್ರಮುಖ ಸದಸ್ಯರು ಕೈಯಿಂದ ಮುಟೇಶನ್ ಮಾಡಿಕೊಂಡು ಉನ್ನಾರ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಅದ ಕಾರಣ ಕೊಡಲೇ ಇವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಂ.ಮಾರೆಪ್ಪ, ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.