ಮಾಳಿ ಸಮಾಜ ನಿಗಮ ಸ್ಥಾಪನೆ, ಸಮಾಜಕ್ಕೆ ಸರ್ಕಾರದ ದೊಡ್ಡ ಕೊಡುಗೆ : ಮಹಾಂತೇಶ ಮಾಳಿ

ಅಥಣಿ :ಫೆ.26: ಕರ್ನಾಟಕ ರಾಜ್ಯದ ಮಾಳಿ/ಮಾಲಗಾರ ಸಮುದಾಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರ ಕೊಟ್ಟ ಮಾತಿನಂತೆ ನಡೆಯುವ ಮೂಲಕ “ಮಾಳಿ ಸಮಾಜ ಅಭಿವೃದ್ದಿ ನಿಗಮ ಮಂಡಳಿ” ಸ್ಥಾಪಿಸಿದೆ ಎಂದು ಮಾಳಿ ಸಮಾಜದ ಯುವ ಮುಖಂಡರು ಹಾಗೂ ಅಖಿಲ ಕರ್ನಾಟಕ ಮಾಳಿ/ಮಾಲಗಾರ ಯುವಕರ ಮಹಾ ಸಂಘ ರಾಜ್ಯಾಧ್ಯಕ್ಷ ಮಹಾಂತೇಶ ಮಾಳಿ ಹೇಳಿದರು.

ಅವರು ರಾಜ್ಯ ಸರ್ಕಾರ ಮಾಳಿ ಸಮುದಾಯಕ್ಕೆ ನಿಗಮ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಟಾಕಿಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿ ಮಾತನಾಡುತ್ತಾ ವಿವಿಧ ಸಮುದಾಯಗಳಿಗೆ ನಿಗಮ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ ಹಾಗೂ ಇದಕ್ಕೆ ಸಹಕರಿಸಿದ ಮಾಜಿ ಡಿಸಿಎಂ ಹಾಗೂ ವಿಪ ಸದಸ್ಯ ಲಕ್ಷ್ಮಣ ಸವದಿ, ಶಾಸಕ ಮಹೇಶ ಕುಮಠಳ್ಳಿ ಸೇರಿದಂತೆ ಎಲ್ಲಾ ಸಚಿವರು ಶಾಸಕರಿಗೆ ಧನ್ಯವಾದ ಹೇಳಿದರು.

ಅನಂತರ ಪತ್ರಕರ್ತ ಸಂತೋಷ ಬಡಕಂಬಿ ಮಾತನಾಡಿ ಆರ್ಥಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದೆ ಉಳಿದ ಸಮಾಜಕ್ಕೆ ಬೊಮ್ಮಾಯಿ ನೇತೃತ್ವದ ಸರಕಾರ ನಿಗಮ ಮಂಡಳಿ ರಚಿಸಿ ಅಭಿವೃದ್ದಿಗೆ ಸಹಕಾರ ಕೊಟ್ಟಿದೆ ಈ ಕಾರ್ಯಕ್ಕೆ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ವಿ.ಪ ಸದಸ್ಯ ಲಕ್ಷ್ಮಣ ಸವದಿ, ಪಿ. ರಾಜೀವ, ಸಿದ್ದು ಸವದಿ, ಶ್ರೀಮಂತ ಪಾಟೀಲ, ಮಹೇಶ ಕುಮಠಳ್ಳಿ ಸೇರಿದಂತೆ ಇತರರ ಸಹಕಾರ ಬಲು ದೊಡ್ಡದು, ನಮ್ಮ ಸಮಾಜಕ್ಕೆ ಇದು ಒಂದು ದೊಡ್ಡ ಮೈಲುಗಲ್ಲು ಇದಕ್ಕೆ ಸಹಕರಿಸಿದ ಸರ್ವರಿಗೂ ಧನ್ಯವಾದಗಳು ಎಂದರು.
ಅನಂತರ ಮುಖಂಡರಾದ ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿ ನಿಗಮ ಮಂಡಳಿ ಘೋಷಣೆಯಲ್ಲಿ ಮುಗಳಖೋಡದ ಸಿ. ಬಿ. ಕುಲಗೋಡ ಅವರ ನೇತೃತ್ವದ ಬೆಂಗಳೂರು ಚಲೋ ತಂಡ ಸೇರಿದಂತೆ ಅನೇಕ ಸಮಾಜದ ಉತ್ಸಾಹಿಗಳ ಕೊಡುಗೆ ಅಪಾರ ಎಂದರು.

ಈ ವೇಳೆ ರಾಜ್ಯ ಸರಕಾರ, ಸಮಾಜದ ಪರವಾಗಿ ಹಾಗೂ ನಿಗಮ ಸ್ಥಾಪನೆಗೆ ಸಹಕರಿಸಿದವರ ಪರವಾಗಿ ಸಮಾಜ ಬಾಂಧವರು ಘೋಷಣೆ ಕೂಗಿ ಸಂಭ್ರಮಿಸಿದರು.

ಈ ವೇಳೆ ಮುಖಂಡರಾದ ಸುಭಾಶ ಮಾಳಿ, ಪರಶುರಾಮ ಸೋನಕರ, ಪ್ರಶಾಂತ ತೋಡಕರ, ರವಿ ಬಡಕಂಬಿ, ಸಿದ್ದು ಮಾಳಿ, ಗಿರೀಶ ದಿವಾನಮಳ, ರಮೇಶ ಮಾಳಿ, ರವಿ ಭಾಸಿಂಗಿ, ಬಸವರಾಜ ಹಳ್ಳದಮಳ, ಮಲ್ಲು ಹುದ್ದಾರ, ಕೇದಾರಿ ದಿವಾನಮಳ, ಪ್ರಭಾಕರ ಚಮಕೇರಿ, ಶ್ರೀಶೈಲ ಚಮಕೇರಿ, ಆಕಾಶ ಬುಟಾಳಿ, ಬಸವರಾಜ ತೇರದಾಳ, ಸಂಜಯ ಬಕಾರಿ, ಮಹಾದೇವ ಚಮಕೇರಿ, ಮೂರ್ತಿ ಶೇಡಬಾಳ, ಬ್ರಹ್ಮಾನಂದ ಮಾಳಿ, ಸಂತೋಷ ಗೋಂದಳಿ, ಹರೀಶ ದಿವಾನಮಳ, ಅನೀಲ ತೆವರಟ್ಟಿ, ಶ್ರೀಶೈಲ ಬಡಕಂಬಿ, ಹಣಮಂತ ಭಾಸಿಂಗಿ, ಮಹಾದೇವ ಹೊನ್ನೊಳ್ಳಿ, ಶ್ರೀಕಾಂತ ಬಡಕಂಬಿ, ಸಚಿನ ಬಡಕಂಬಿ, ರಾಜು ಮಾಳಿ, ಮಹಾಂತೇಶ ಭಾಸಿಂಗಿ, ಲಕ್ಷ್ಮಣ ಬಡಕಂಬಿ, ಅಶೋಕ ಕೊಬ್ರಿ, ಶ್ರೀಧರ ಮಾಳಿ, ಶೇಖರ ತೆವರಟ್ಟಿ, ಮಹಾದೇವ ಹಳ್ಳದಮಳ, ಕಾಡು ಅಡಹಳ್ಳಿ, ಅರುಣ ಮಾಳಿ, ಮಹಾಂತೇಶ ಇರಳಿ, ರಾಜು ಇರಳಿ, ಪಿಂಟು ಚಮಕೇರಿ, ಕೇದಾರಿ ಐಗಳಿ, ರಮೇಶ ಕಾಗಲೆ, ತಮ್ಮಣ್ಣ ಕಾಗಲೆ, ತಮ್ಮಣ್ಣ ಖಲಾಟೆ, ಮಹಾಂತೇಶ ಕೋರಿ, ಅನೀಲ ನರೋಡೆ, ಮುರಗೇಶ ಸೋನಕರ ಸೇರಿದಂತೆ ಇತರರಿದ್ದರು,