ಮಾಳಾಪುರಕ್ಕೆ ಬಸ್ ಸಂಚಾರ ಪ್ರಾರಂಭ

ಸಂಜೆವಾಣಿ ವಾರ್ತೆ
ಸಂಡೂರು : ಜೂ: 23- ರಾಜಾಪುರ, ಉಬ್ಬಲಗಂಡಿ, ಮೆಟ್ರಿಕಿ ನಡುವಿನ ಮಾಳಾಪುರ ಗ್ರಾಮಕ್ಕೆ ಪರ ವಿರೋಧದ ನಡುವೆ ವಾಹನಕ್ಕೆ ಚಾಲನೆ ನೀಡಲಾಗಿದೆ ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಗಳ ಕಾರ್ಯಕರ್ತರು ವಾಹನ ಬಿಟ್ಟಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳ ಪತ್ರವನ್ನು ನನ್ನಗೆ ತಂದು ಕೊಟ್ಟರೆ ನಾನು ಸಂಡೂರಿನ ಶಾಸಕರಿಗೆ ನಿಮ್ಮ ಪತ್ರವನ್ನು ಕೊಡುತ್ತೇನೆ. ಆಗ ಅವರು ಏನು ಹೇಳುತ್ತಾರೆ ನಾನು ಅದರಂತೆ ನಡೆದುಕೊಳ್ಳುತ್ತೇನೆ ನನ್ನಗೆ ಬರವಣಿಗೆ ಪತ್ರ ಮುಖ್ಯ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ವ್ಯವಸ್ಥಾಪಕ ವೆಂಕಟೇಶ್ ಆಚಾರ್‍ರವರು ಸಂಜೆವಾಣಿ ವರದಿಗಾರರ ಜೊತೆ ಮಾತನಾಡುತ್ತಾ ತಿಳಿಸಿದರು.
ಚಾಲಕರ ಮತ್ತು ನಿರ್ವಹಕರ ಕೊರತೆ :- ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 22 ಚಾಲಕರು 22 ನಿರ್ವಹಕರ ಕೊರೆತೆಯಿದ ಅದರಲ್ಲಿಯೂ ನಾನು ಹೊಂದಾಣಿಕೆ ಮಾಡಿಕೊಂಡು ವಾಹನವನ್ನು ಬಿಟ್ಟಿದೇನೆ ನಮ್ಮ ಶಾಸಕರು ಮೈಸೂರು, ಬೆಂಗಳೂರು ವಾಹನವನ್ನು ರದ್ದು ಮಾಡಿ ಬರೀ ಗ್ರಾಮೀಣ ಭಾಗಕ್ಕೆ ವಾಹನವನ್ನು ಬಿಡಲು ಆದೇಶಿಸಿರುತ್ತಾರೆ, ಶಾಸಕರ ಆದೇಶದಂತೆ ನಡೆದರೆ ನಾನು ನನ್ನ ಕೆಲಸಕ್ಕೆ ಕೆಸರು ಸಿಡಿಸಿಕೊಂಡತಾಗುತ್ತದೆ ಸಂಡೂರಿನ ಡಿಪೋದಲ್ಲಿ ಗುಜಾರಿ ಬಸ್ಸುಗಳೇ ಅಧಿಕವಾಗಿದ್ದು ಇಲ್ಲಿಯ ಸಮಸ್ಯೆಯನ್ನು ಆಲಿಸುವವರೆ ಇಲ್ಲದಂತಾಗಿದೆ ಎಂದು ಬೇಸರವನ್ನು ವ್ಯಕ್ತಪಡಿಸಿದರು.

Attachments area