ಮಾಲ್ಪುವಾ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು:
ಮೈದಾ ಹಿಟ್ಟು: ಒಂದು ಕಪ್
ಮಿಲ್ಕ್ ಪೌಡರ್ : ಅರ್ಧ ಕಪ್
ರವಾ: ಎರಡು ಚಮಚ
ಸೋಂಪಿನ ಪುಡಿ: ಅರ್ಧ ಚಮಚ
ಹಾಲು: ಒಂದು ಕಪ್
ಸಕ್ಕರೆ : ಒಂದು ಕಪ್
ಏಲಕ್ಕಿ ಪುಡಿ: ಅರ್ಧ ಚಮಚ
ಎಣ್ಣೆ : ಕರಿಯಲು
ಡ್ರೈ ಫ್ರುಟ್ಸ್ : ಸ್ವಲ್ಪ
ಮಾಡುವ ವಿಧಾನ:
ಒಂದು ಬೌಲ್‌ಗೆ ಮೈದಾ, ಹಾಲಿನ ಪುಡಿ, ಸೋಂಪಿನ ಪುಡಿ, ರವಾ ಮತ್ತು ಹಾಲನ್ನು ಮೇಲೆ ಹೇಳಿರುವ ಅಳತೆಯಲ್ಲಿ ಹಾಕಿ ಚೆನ್ನಾಗಿ ಗಂಟಾಗದಂತೆ ಮಿಕ್ಸ್ ಮಾಡಿ. ಈ ಹಿಟ್ಟು ದಪ್ಪವಾಗಿ ದೋಸೆ ಹಿಟ್ಟಿನ ಹದದಲ್ಲಿ ಇರಬೇಕು. ಅಗತ್ಯವಿದ್ದರೆ ಇನ್ನೂ ಸ್ವಲ್ಪ ಹಾಲನ್ನು ಸೇರಿಸಿಕೊಳ್ಳಬಹುದು. ಹೀಗೆ ತಯಾರಿಸಿದ ಹಿಟ್ಟನ್ನು ಅರ್ಧ ಗಂಟೆ ಹಾಗೆಯೇ ಬಿಡಿ. ಈಗ ಒಂದು ಪಾತ್ರೆಯಲ್ಲಿ ಒಂದು ಕಪ್ ಸಕ್ಕರೆ ಮತ್ತು ಅರ್ಧ ಕಪ್ ನೀರನ್ನು ಹಾಕಿ ಕುದಿಸಿ. ಸಕ್ಕರೆಯು ಕರಗಿದ ನಂತರ ಐದು ನಿಮಿಷ ಚೆನ್ನಾಗಿ ಕುದಿಸಿ ಏಲಕ್ಕಿ ಪುಡಿಯನ್ನು ಬೆರೆಸಿ ಸ್ಟೌ ಆಫ್ ಮಾಡಿ ಸಕ್ಕರೆ ಪಾಕವನ್ನು ಮುಚ್ಚಿಡಿ. ಈಗ ಒಂದು ಪ್ಯಾನ್‌ನಲ್ಲಿ ಅರ್ಧದಷ್ಟು ಎಣ್ಣೆಯನ್ನು ತೆಗೆದುಕೊಂಡು ಬಿಸಿ ಮಾಡಿ. ಎಣ್ಣೆಯು ಕಾದ ನಂತರ ಈಗಾಗಲೇ ತಯಾರಿಸಿಟ್ಟ ಹಿಟ್ಟನ್ನು ಇನ್ನೊಮ್ಮೆ ಮಿಕ್ಸ್ ಮಾಡಿಕೊಂಡು ಒಂದು ಸೌಟಿನಷ್ಟು ಹಿಟ್ಟನ್ನು ಅದರಲ್ಲಿ ಹಾಕಿ. ಒಂದು ನಿಮಿಷ ಚಿಕ್ಕ ಉರಿಯಲ್ಲಿ ಬೇಯಿಸಿದ ನಂತರ ಅದನ್ನು ತಿರುವಿ ಹಾಕಿ ಬೇಯಿಸಿ ತೆಗೆಯಿರಿ. ನಂತರ ಅವುಗಳನ್ನು ಈಗಾಗಲೇ ತಯಾರಿಸಿಟ್ಟ ಸಕ್ಕರೆ ಪಾಕದಲ್ಲಿ ಚೆನ್ನಾಗಿ ಅದ್ದಿ ತೆಗೆದು ಅವುಗಳ ಮೇಲೆ ಡ್ರೈ ಫ್ರೂಟ್ಸ್ ಚೂರುಗಳನ್ನು ಹಾಕಿದರೆ ರುಚಿಯಾದ ಮಾಲ್ಪುವಾ ಸವಿಯಲು ಸಿದ್ಧವಾಗುತ್ತದೆ.