ಮಾಲು ಸಮೇತ ಕಳ್ಳರನ್ನು ಹಿಡಿದ ಹೊನ್ನಾಳಿ ಪೊಲೀಸರು

ಹೊನ್ನಾಳಿ.ಏ.೨೬; ಗಸ್ತು ತಿರುಗುತ್ತಿದ್ದ ವೇಳೆ ಸುಮಾರು ೮೦ ಸಾವಿರ ಮೌಲ್ಯದ ನೈಲಾನ್ ರಬ್ಬರ್ ರನ್ನು ಹೊನ್ನಾಳಿ ಪೊಲಿಸರು ವಶ ಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ. ದಿಡಗೂರು ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿರುವಾಗ ಅರಬಗಟ್ಟೆ ಗ್ರಾಮದ ಕಡೆಯಿಂದ ಅಪೆ ಗೂಡ್ಸ್ ಆಟೋ  ತಡೆದು ಪರಿಶೀಲನೆ ನಡೆಸಿದಾಗ ಕಳುವಾಗಿದ್ದ ಮಾಲು ಆಟೋದಲ್ಲಿ ಪತ್ತೆಯಾಗಿದೆ. ನಂತರ ಆರೋಪಿಗಳಾದ ಹನುಮಂತಪ್ಪ. ಮಂಜುನಾಥ್.ಪವನ್ ಅವರನ್ನು ಬಂಧಿಸಲಾಗಿದೆ. ಇವರು ಸೊರಟೂರು ಗ್ರಾಮದ ವಾಸಿಗಳಾಗಿದ್ದು  ಕಳುವು ಮಾಡಿದ ಮಾಲನ್ನು ಹೊತ್ತೊಯ್ಯುತ್ತಿದ್ದ ಅಪೆ ಗೂಡ್ಸ್ ಆಟೋ ವಶಪಡಿಸಿಕೊಂಡಿದ್ದಾರೆ.  ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹನುಮಂತರಾಯ. ಎಎಸ್ಪಿ ರಾಜೀವ್ ಎಸ್ ಹಾಗೂ ಪೊಲೀಸ್ ಉಪಾಧೀಕ್ಷಕ ಡಾ.ಸಂತೋಷ್  ಮಾರ್ಗದರ್ಶನದಲ್ಲಿ ಹೊನ್ನಾಳಿ ವೃತ್ತ ನಿರೀಕ್ಷಕರಾದ ಟಿ ವಿ ದೇವರಾಜ್ ರವರ ನೇತೃತ್ವದಲ್ಲಿ ಪಿಎಸ್ಐ ಬಸವರಾಜ್ ಬಿರಾದಾರ್ ಹಾಗೂ ಹೊನ್ನಾಳಿ ಠಾಣೆ ಸಿಬ್ಬಂದಿಗಳಾದ ಫೈರೋಜ್ ಖಾನ್. ವೆಂಕಟರಮಣ. ಶಂಕರಗೌಡ. ಶಾಂತಕುಮಾರ್. ಜಗದೀಶ್. ಚೇತನ್ ಕುಮಾರ್. ರಾಮಚಂದ್ರ. ಇವರುಗಳ ತಂಡವು ಕಳುವು ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಮತ್ತು ಮಾಲನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಇವರಿಗೆ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.