ಮಾಲೀಕರ ಚಿನ್ನ ಕಳವು ; ಇಬ್ಬರ ಸೆರೆ

ಬೆಂಗಳೂರು,ಮಾ.೨೪-ಕೆಲಸ ಮಾಡುತ್ತಿದ್ದ ಹೋಟೆಲ್ ಮಾಲೀಕರ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಮಹಿಳೆ ಮತ್ತು ಆಕೆಯ ಸ್ನೇಹಿತನನ್ನು ಬಂಧಿಸುವಲ್ಲಿ ಕೆಪಿ ಅಗ್ರಹಾರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆಆರ್ ಪುರಂನ ಅಮರಜ್ಯೋತಿ ನಗರದ ಅನು (೪೫) ಹಾಗೂ ಆಕೆಯ ಸ್ನೇಹಿತ ಕಲಬುರಗಿಯ ಚೆನ್ನವೀರ ನಗರದ ರೇಣುಕಾನಂದ (೩೧) ಬಂಧಿತ ಆರೋಪಿಯಾಗಿದ್ದಾರೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಆರೋಪಿಗಳಿಂದ ೧ ಲಕ್ಷ ೪೫ ಸಾವಿರ ಮೌಲ್ಯದ ೪೫ ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಅನು ಕೆಪಿ ಅಗ್ರಹಾರದ ಅಂಕಲ್ ಕ್ಯಾಂಟೀನ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಹೋಟೆಲ್‌ನ ಮಾಲೀಕರ ಮನೆಗೆ ಹೋಗಿದ್ದ ಆರೋಪಿ ಅನು ಅವರಿಗೆ ಗೊತ್ತಾಗದಂತೆ ಜ್ಯುವೆಲರಿ ಬಾಕ್ಸ್‌ನಲ್ಲಿದ್ದ ೪೫ ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿ ಸ್ನೇಹಿತ ರೇಣುಕಾನಂದನಿಗೆ ನೀಡಿದ್ದಳು. ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಕೆಪಿ ಅಗ್ರಹಾರ ಪೊಲೀಡರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ರೇಣುಕಾನಂದ ನಿವೃತ್ತ ಎಆರ್‌ಎಸ್‌ಐರೊಬ್ಬರ ಪುತ್ರನಾಗಿದ್ದು, ಪ್ರಾವಿಷನ್ ಸ್ಟೋರ್ ನಡೆಸುತ್ತಿದ್ದ ಆತ ಅನುವಿಗೆ ಸ್ನೇಹಿತನಾಗಿದ್ದು, ಆಕೆಯಿಂದ ಕಳವು ಚಿನ್ನವನ್ನು ಕೊಂಡೊಯ್ದು ಮಾರಾಟ ಮಾಡಿದ್ದ ಎಂದು ತಿಳಿಸಿದರು.