ಮಾಲೀಕನಿಲ್ಲದ ಗುಂಡನ ಕಥೆ ವ್ಯಥೆ

ಮನುಷ್ಯ ಮತ್ತು ನಾಯಿ ನಡುವಿನ ಅವಿನಾಭಾವ ಸಂಬಂಧದ ಕಥೆ ಹೇಳುವ  “ನಾನು ಮತ್ತು ಗುಂಡ” ಚಿತ್ರ ಎರಡು ವರ್ಷಗಳ ಹಿಂದೆ ತೆರೆಗೆ ಬಂದು ಯಶಸ್ವಿಯಾಗಿತ್ತು.

ನಟ ಶಿವರಾಜ್ ಕೆ.ಆರ್. ಪೇಟೆ ಮತ್ತು ನಾಯಿಯ  ಅದ್ಭುತ ಅಭಿನಯವಿತ್ತು ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ರಘು ಹಾಸನ್ ಮುಂದುವರೆದ ಭಾಗವಾಗಿ “ನಾನು ಮತ್ತು ಗುಂಡ -2” ಎಂಬ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಚಿತ್ರದ  ಮೊದಲ  ಪೋಸ್ಟರ್ ಇದೀಗ  ಬಿಡುಗಡೆಯಾಗಿದೆ. ಮೊದಲ ಭಾಗದಲ್ಲಿ ನಾಯಕ ಶಿವರಾಜ್ ಕೆ.ಆರ್.ಪೇಟೆಪಾತ್ರ ಮರಣ ಹೊಂದುತ್ತದೆ. ಎರಡನೇ ಭಾಗದಲ್ಲಿ ಮಾಲೀಕನನ್ನು ಕಳೆದುಕೊಂಡ ನಾಯಿ ಸಮಾಜದಲ್ಲಿ ಹೇಗೆ ಜೀವನ ನಡೆಸುತ್ತದೆ ಎನ್ನುವ ಭಾವನಾತ್ಮಕ ಕಥೆಯೊಂದಿಗೆ ಮನರಂಜನಾತ್ಮಕವಾಗಿ  ಹೇಳಲಾಗುತ್ತಿದೆ.

ಚಿತ್ರವನ್ನು ಈಗಾಗಲೇ ಮೈಸೂರು ನಗರದ ಸುತ್ತಮುತ್ತ ಚಿತ್ರದ ಚಿತ್ರೀಕರಣ ಭರದಿಂದ  ನಡೆಯುತ್ತಿದ್ದು, ಶೇ.50 ರಷ್ಟು ಶೂಟಿಂಗ್ ಮುಕ್ತಾಯಗೊಂಡಿದೆ.ಆರ್.ಪಿ.ಪಟ್ನಾಯಕ್ ಸಂಗೀತ ಸಂಯೋಜನೆ,  ರುತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತವಿದೆ