ಮಾಲಿನ್ಯ ಹೋಗಲಾಡಿಸಲು ಮರ ಗಿಡ ಬೆಳೆಸಿ-ಕಲ್ಲೂರ

ಹುಮನಾಬಾದ್:ಜೂ.9:ಶುದ್ದ ಪರಿಸರ ನಿರ್ಮಾಣ ಮಾಡಲು ಪ್ರತಿ ಯೊಬ್ಬರು ಮರ ಗಿಡ ಬೆಳಸಬೇಕೆಂದು ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಸುಭಾಷ ಕಲ್ಲೂರ ತಾಲೂಕಿನ ಹಳ್ಳಿಖೇಡ (ಬಿ,) ಕಾರ್ಖಾನೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತ ನುಡಿದರು. ಪರಿಸರ ಮಾಲಿನ್ಯದಿಂದ ಹಲವಾರು ರೋಗಗಳಿಗೆ ಬಲಿ ಯಾಗುತ್ತಿದ್ದವೆ ಮಾಲಿನ್ಯ ಹೋಗಲಾಡಿಸಲು ಮರ ಗಿಡ ಬೆಳಸಲು ಕರೆ ನೀಡಿದರು. ಕಾರ್ಖಾನೆ ಆವರಣದಲ್ಲಿ ಹಾಗೂ ಸುತ್ತ ಮುತ್ತ ವಾಯ್ಯು ಮಾಲಿನ್ಯ ಹೋಗಲಾಡಿಸಲು ಹಲವರು ಮರಗಿಡಗಳನ್ನು ಬೆಳಸಲಾಗಿದೆ ಅವುಗಳ ಸಂರಕ್ಷಣೆ ಮಾಡಲು ನಮ್ಮಲ್ಲೆರ ಆಧ್ಯಕರ್ತವಾಗಿದೆ.ಕಾರ್ಖಾನೆ ಬರುವ ಹಂಗಾಮಿನಲ್ಲಿ ಕಬ್ಬು ನುರಿಸುವ ಕಾರ್ಯಕ್ಕೆ ಕಾರ್ಖಾನೆ ಸ್ವಚ್ಛತೆ ಹಗೂ ಸಿದ್ದತ್ತೆ ಮಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು ಈ ಕಾರ್ಯಕ್ರಮದಲ್ಲಿ ತಹಸಿಲ್ದಾರ ನಾಗಯ್ಯ ಹೀರೆಮಠ, ಕಾರ್ಖಾನೆ ಎಂ, ಡಿ, ಉಪ್ಪಿನ,ವಲಯ ಅರಣ್ಯ ಅಧಿಕಾರಿ ಬಸವರಾಜ ಡಾಂಗೆ, ಮಲ್ಲಿಕಾರ್ಜುನ ಪ್ರಭಾ,ಉಪ ವಲಯ ಅರಣ್ಯಧಿಕಾರಿಗಳಾದ ರೌಫಖಾನ ಅಂಬಾದಾಸ ಸಂತೋಷ ಉಪಸ್ಥಿತರಿದ್ದರು.