ಮಾಲಿನ್ಯ ಮುಕ್ತ ಜಗಳೂರು ತಾಲ್ಲೂಕು ಮಾಡಲು ಕರೆ

ಜಗಳೂರು.ಜು.೨೨; ಪಟ್ಟಣವನ್ನು ಮಾಲಿನ್ಯ ಮುಕ್ತ ಪಟ್ಟಣವನ್ನಾಗಿ ಮಾಡಿ ಎಂದು ಶಾಸಕ ಎಸ್ ವಿ ರಾಮಚಂದ್ರಪ್ಪ ಹೇಳಿದರು ನೂತನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪಟ್ಟಣ ಪಂಚಾಯಿತಿ ಹಾಗೂ ಹಸಿರು ದಳ ಇವರ ಸಹಯೋಗದಲ್ಲಿ ತ್ಯಾಜ್ಯ ವಿಂಗಡಣೆ ಪೌರ ಕಾರ್ಮಿಕರುಗಳಿಗೆ, ತ್ಯಾಜ್ಯ ಆಯುವವರಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರನಮ್ಮ ಭಾರತ ದೇಶದ ಹೆಮ್ಮೆಯ ಪ್ರಧಾನಿ ಮೋದಿಯವರ ಸ್ವಚ್ಚ ಭಾರತ್ ಅಶಯದಂತೆ ಸ್ವಚ್ಚತೆಗೆ ಹೆಚ್ಚು ಒತ್ತು ನೀಡಿ,ಕಸದಲ್ಲಿ ಕಷ್ಟ ಪಟ್ಟು ದುಡಿಯುವ ಕಸ ಆಯುವವರು ಕಸ ವಿಲೇವಾರಿ ಮಾಡುತ್ತ ಪಟ್ಟಣವನ್ನು ಸ್ವಚ್ಚವಾಗಿ ಇಡುವಲ್ಲಿ ಕಸ ಆಯುವವರ ಪಾತ್ರ ಮಹತ್ವವಾದದ್ದು,ಇಂತವರಿಗೆ ರಾಜ್ಯದಲ್ಲಿ ಮೊಟ್ಟ ಮೊದಲಾಗಿ ಜಗಳೂರು ಪಟ್ಟಣ ಪಂಚಾಯಿತಿ ಅವರನ್ನು ಗುರುತಿಸಿ ಗುರುತಿನ ಚೀಟಿ ನೀಡಿರುವುದು ಸಂತಸತಂದಿದೆ ಅಲ್ಲದೇ ಹಸಿರು ದಳ ಸಂಸ್ಥೆಯು ಕಸ ಆಯುವವರಿಗೆ ಆಸರೆಯಾಗಿ ಸಹಾಯ ಮಾಡುವುದಲ್ಲದೇ ಕಸ ವಿಲೇವಾರಿ ಮಾಡುವಲ್ಲಿ ಕೈ ಚೋಡಿಸುತ್ತಿದ್ದು ಮುಂದೆ ಜಗಳೂರು ಪಟ್ಟಣವನ್ನು ಹಸಿರು ಪಟ್ಟಣವನ್ನಾಗಿಸಲಿ ಎಂದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯ್ ನಾಯ್ಕ್. ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಹೆಚ್.ಸಿ. ಮಹೇಶ್.ಪ.ಪಂ. ಸಿದ್ದಪ, ಉಪಾಧ್ಯಕ್ಷ ಮಂಜಮ್ಮ, ಹಾಗೂ ಹಸಿರು ದಳ ಸಂಸ್ಥೆಯಾ ಸಂಸ್ಥಾಪಕಿ ನಳೀನ ಶೇಖರ್ ಆರೋಗ್ಯ ನಿರೀಕ್ಷಕರಾದ ಕಿಫಾಯಿತ್ ಅಮ್ಮದ್ ಪ.ಪಂ ಸದಸ್ಯರಾದ ತಿಪ್ಪೇಸ್ವಾಮಿ ಆರ್. ಲಲಿತ ಶಿವಣ್ಣ.ದೇವರಾಜ್. ನಿರ್ಮಲ ಕುಮಾರಿ. ನವೀನ್ ಕುಮಾರ್ ದೇವರಾಜ್ ಪಾಪ ಲಿಂಗ. ರವಿಕುಮಾರ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್ ಕೆ ಮಂಜುನಾಥ್. ಮಾಜಿ ತಾಪಂ ಸದಸ್ಯ ಸಿದ್ದೇಶ್ ಮುಖಂಡರಾದ ಓಬಳೇಶ್.ಲೋಕೇಶ್ ಓಬಳೇಶ್.  ಸೇರಿದಂತೆ ಕಚೇರಿ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು  ಉಪಸ್ಥಿತರಿದ್ದರು