ಮಾಲಿಕರ ಪರವಾದ ಕಾಮಿ೯ಕ ಸಂಹಿತೆ ; ಕಾರ್ಮಿಕ ವರ್ಗದ ಖಂಡನೆ

ದಾವಣಗೆರೆ.ಮೇ.೪; ರಾಜ್ಯ ಬಿಜೆಪಿ ಸಕಾ೯ರವು ಕೋವಿಡ್ ಸೋಂಕಿತರ ಸಾವು ನೋವು ತಡೆಯುವ ಬದಲು ಕಾಮಿ೯ಕ ಸಂಹಿತೆಗಳ ಅಡಿ ನಿಯಮಗಳನ್ನು ರಚಿಸಿ ಮಾಲಿಕರ ಪರವಾಗಿ ಜಾರಿಗೆ ತರಲು ತರಾತುರಿಯಲ್ಲಿ ಇರುವುದು ಅವಿವೇಕದ ಪರಮಾವಧಿ ಎಂದು ಸಿ.ಐ.ಟಿ.ಯು. ಜಿಲ್ಲಾ ಸಮಿತಿ ಸಂಚಾಲಕ ಕೆ.ಹೆಚ್ ಆನಂದರಾಜ್ ಖಂಡಿಸಿದ್ದಾರೆ. ನಿಯಮ ರಚಿಸಲು ಗಮನ ನೀಡುವ ಬದಲು ರಾಜ್ಯದ ಜನತೆಯ ಜೀವ ಉಳಿಸಲು ಆದ್ಯತೆ ನೀಡಬೇಕು.ಕಾಮಿ೯ಕ ಸಂಹಿತೆಗಳ ಅಡಿ ಕೇಂದ್ರ ಸರ್ಕಾರವೆ ನಿಯಮಗಳನ್ನು ಇನ್ನೂ ಅಂತಿಮಗೊಳಿಸಿಲ್ಲ. ಆದರೆ ರಾಜ್ಯ ಸಕಾ೯ರವು ವೇತನ ಸಂಹಿತೆಗಳ ಅಡಿ ನಿಯಮಗಳನ್ನು ರಚಿಸಿ ಜಾರಿಗೆ ತರಲು ಮುಂದಾಗಿದೆ. ಮೇ 3 ರಂದು ರಾಜ್ಯ ಸಕಾ೯ರವು ಕರೆದಿದ್ದ ಆನ್‌ಲೈನ್ ಸಮಾಲೋಚನ ಸಭೆಯನ್ನು ಎಲ್ಲಾ ಕೇಂದ್ರ ಕಾಮಿ೯ಕ ಸಂಘಟನೆಗಳು ಬಹಿಷ್ಕರಿಸಿ ಕೋವಿಡ್ ಆರೋಗ್ಯ ತುತು೯ ಮುಗಿದ ನಂತರ ದೈಹಿಕ ಸಭೆ ಕರೆಯಲು ಒತ್ತಾಯಿಸಿವೆ. ಆನಂತರ ಅದನ್ನು ಅಂತಿಮಗೊಳಿಸ ಬೇಕೆಂದು ಆಗ್ರಹಿಸಿವೆ. ಆದರೂ ಸಹಾ ಮಾಲೀಕರ ಪ್ರತಿನಿಧಿಗಳೊಂದಿಗೆ ಆನ್‌ಲೈನ್ ಸಭೆ ನಡೆಸಿರುವ ರಾಜ್ಯ ಬಿಜೆಪಿ ಸಕಾ೯ರಕ್ಕೆ ಜನರ ಜೀವಕ್ಕಿಂತ ಬಂಡವಾಳಿಗರ ಸೇವೆಯೆ ಆಧ್ಯತೆಯಾಗಿದೆ ಎಂದಿದೆ.ಇದರ ಜೊತೆಯಲ್ಲೇ ಕೈಗಾರಿಕಾ ಸಂಬಂಧಗಳ ಸಂಹಿತೆ ಅಡಿ ಕರಡು ನಿಯಮಾವಳಿಗಳನ್ನು   ಪ್ರಕಟಿಸಿ 30 ದಿನಗಳಲ್ಲಿ ಆಕ್ಷಪಣೆಗಳು ಏನಾದರು ಇದ್ದಲ್ಲಿ  ಸಲ್ಲಿಸಲು ಕೋರಿದೆ. ಕೋವಿಡ್ ಎರಡನೆ ಅಲೆ ಲಾಕ್ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿ ಸಾವು ನೋವಿಗೆ ತುತ್ತಾಗಿರುವ ಕಾಮಿ೯ಕರಿಗೆ ನೆರವು ಪರಿಹಾರ ನೀಡಬೇಕಾದ ಕಾಮಿ೯ಕ ಇಲಾಖೆಯ ಮೇಲೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸಕಾ೯ರಗಳು ಒತ್ತಡ ಹೇರಿ ಕಾಮಿ೯ಕರ ಪರಿಹಾರ ಕಾಯ೯ಗಳ ಬದಲು ಬಂಡವಾಳಿಗರ ಸೇವೆಯಲ್ಲಿ ತೊಡಗಿಸಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.