ಮಾಲಿಕಯ್ಯಾ ಗುತ್ತೇದಾರರಿಗೆ ರಾಜ್ಯಸಭಾ ಸದಸ್ಯರಾಗಿ ನೇಮಕ ಮಾಡಿ ; ರಾಮ್ ತಳವಾರ ಮನವಿ

ಕಲಬುರಗಿ ; ಫೆ.11:ಮಾಜಿ ಸಚಿವರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ನಾಯಕರಾದ ಮಾಲಿಕಯ್ಯಾ ಗುತ್ತೇದಾರ ಅವರನ್ನು ರಾಜ್ಯಸಭೆಯ ಸದಸ್ಯರಾಗಿ ನೇಮಕ ಮಾಡಬೇಕೆಂದು ಬಿಜೆಪಿ ಯುವ ಮುಖಂಡರಾದ ರಾಮ್ ತಳವಾರ ಹಸರಗುಂಡಗಿ ಅವರು ಬಿಜೆಪಿ ಪಕ್ಷದ ನಾಯಕರಲ್ಲಿ ಮನವಿ ಮಾಡಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಅತಿಹೆಚ್ಚಿನ ಸ್ಥಾನ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದರ ಮೂಲಕ ಮತ್ತೊಮ್ಮೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ದೇಶದ ಚುಕ್ಕಾಣಿ ಹಿಡಿಯಬೇಕಾಗಿದೆ. ಅದಕ್ಕಾಗಿ, ಆರು ಬಾರಿ ಶಾಸಕರು, ಸಚಿವರಾಗಿ ಸೇವೆ ಸಲ್ಲಿಸಿದ ಹಿರಿಯ ರಾಜಕಾರಣಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಹೆಸರುವಾಸಿಯಾಗಿರುವ ಮಾಲಿಕಯ್ಯಾ ಗುತ್ತೇದಾರ ಅವರನ್ನು ರಾಜ್ಯಸಭೆಯ ಸದಸ್ಯರಾಗಿ ನೇಮಿಸುವ ಮೂಲಕ ಹಿರಿಯ ನಾಯಕರಿಗೆ ಸೂಕ್ತ ಸ್ಥಾನ ಮಾನ ಕಲ್ಪಿಸಿದಂತಾಗುತ್ತದೆ. ಅದರ ಜೊತೆಗೆ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಮತ್ತಷ್ಟು ಹೆಚ್ಚಿನ ಶಕ್ತಿ ಬರಲಿದೆ ಎಂದು ತಳವಾರ್ ಬಿಜೆಪಿ ರಾಜ್ಯ ಹಾಗೂ ಕೇಂದ್ರದ ನಾಯಕರಿಗೆ ತಿಳಿಸಿದರು.

ಬಿಜೆಪಿ ಪಕ್ಷದ ಹೈಕಮಾಂಡ್ ಹಾಗೂ ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನಮ್ಮ ನಾಯಕರಾದ ಮಾಲಿಕಯ್ಯಾ ಗುತ್ತೇದಾರ ಅವರಿಗೆ ಸೂಕ್ತವಾದ ಸ್ಥಾನ ಮಾನ ನೀಡುತ್ತಾರೆ ಎಂದು ವಿಶ್ವಾಸವಿದೆ ಎಂದು ಅಫಜಲಪೂರ ಬಿಜೆಪಿ ಯುವ ಮುಖಂಡರಾದ ರಾಮ್ ತಳವಾರ್ ಹಸರಗುಂಡಗಿ ಅವರು ಹೇಳಿದರು.