ಮಾಲಹಳ್ಳಿ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿ

ಕೆಂಭಾವಿ:ಸೆ.28:ಪಟ್ಟಣ ಸಮೀಪದ ಮಾಲಹಳ್ಳಿ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ )ವತಿಯಿಂದ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ವಿಭಾಗೀಯ ಸಂಚಾಲಕರಾದ ಶಿವಶರಣವಾಡಿ ದಶಕಗಳಿಂದಲು ಮಾಲಹಳ್ಳಿ ಗ್ರಾಮ ಒಂದು ಬಸ್ ನ್ನು ಕಂಡಿಲ್ಲ ಇಲ್ಲಿ ಗ್ರಾಮಸ್ಥರಿಗೆ ವಿದ್ಯಾರ್ಥಿಗಳಿಗೆ ಬಹು ತೊಂದರೆಯಾಗುತಿದ್ದು ಶೀಘ್ರವೇ ಸಾರಿಗೆ ಸಂಪರ್ಕದ ಸಮಸ್ಯೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಹೋಬಳಿ ಸಂಚಾಲಕ ಬಸವರಾಜ ಹೇಮನೂರ,ಸುರೇಶ ಮಾಳಳ್ಳಿಕರ,ಯಲ್ಲಪ್ಪ ಭಾವಿಮನಿ,ಜಟ್ಟೆಪ್ಪ ಮುಷ್ಠಳ್ಳಿ,ರಫೀಕ ಖುರೇಶಿ,ದೇವಪ್ಪ ಕಿರದಳ್ಳಿ ,ನಿಂಗಪ್ಪ ಕಿರದಳ್ಳಿ,ಸೂಗಪ್ಪ ಕಾಚಾಪೂರ ಸೇರಿದಂತೆ ಅನೇಕರಿದ್ದರು.