ಮಾಲವಿ :ಮೆರವಣಿಗೆಯೊಂದಿಗೆ ಗುಡಿ ತುಂಬಿದ ಗ್ರಾಮ ದೇವತೆ   


ಸಂಜೆವಾಣಿ ವಾರ್ತೆ                 
ಹಗರಿಬೊಮ್ಮನಹಳ್ಳಿ. ಮೇ.05 ತಾಲೂಕಿನ ಮಾಲವಿ ಜಾತ್ರೆಯ ಅಂಗವಾಗಿ ಕೋಣನ ಮೆರವಣಿಗೆಯೊಂದಿಗೆ ಗ್ರಾಮ ದೇವತೆ ಶ್ರೀ ಊರಮ್ಮ ದೇವಿ ಗುಡಿ ತುಂಬುವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.          ಶನಿವಾರ ನೆಡೆದ ಈ ಕಾರ್ಯಕ್ರಮ ಗಂಗಾ ಪೂಜೆಯೊಂದಿಗೆ ಗ್ರಾಮ ದೇವತೆ ಕೆಲು ಹೊತ್ತು ಊರಮ್ಮನ ಕೋಣವನ್ನು ಹಲಗೆ ಡೊಳ್ಳು ಡ್ರಮ್ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಉಧೋ ಉಧೋ ಉದ್ಘಾರ ಜಯಘೋಷ ಮದ್ಯೆ ಊರಮ್ಮನ ಕೋಣದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.ಬಳಿಕ ದೇವಸ್ಥಾನದ ಸುತ್ತಾ ಪ್ರದಕ್ಷಿಣೆ ಹಾಕಿದ ನಂತರ ಕೊಣಕ್ಕೆ ಪೂಜೆ ಸಲ್ಲಿಸಲಾಯಿತು.ಶ್ರೀ ದೇವತೆ ಕೆಲು ಗೆ ನಿವಾಳಿ ಅರತಿಯೊಂದಿಗೆ ಶ್ರೀ ದೇವಿಯನ್ನು ಗುಡಿ ತುಂಬಿಸಿ ಶ್ರೀ ಊರಮ್ಮ ದೇವಿಗೆ  ಘಂಟಾನಾದ ಮಹಾ ಮಂಗಳಾರತಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮದ ಶ್ರೀ ಊರಮ್ಮ ಹಾಗೂ ಶ್ರೀ ದುರುಗಮ್ಮ ದೇವತೆಯರಿಗೆ ಹುಡಿ ತುಂಬಲಾಯಿತು.ಬಳಿಕ ಮಹಿಳೆಯರು  ಹೂವು ಕಾಯಿ ಹಣ್ಣು ಶ್ರೀ ದೇವತಿಯರಿಗೆ ಸಮರ್ಪಿಸಿ ಭಕ್ತಿ ಭಾವ ಮೆರೆದರು.                                                                                   ಈ ವೇಳೆ ಗ್ರಾಮದ ಕೊಟ್ರಯ್ಯ ಸ್ವಾಮಿ,ಅಜ್ಜಯ್ಯ, ತಳವಾರ ಮರಿಯಜ್ಜ, ವಟ್ಟಮ್ಮನಹಳ್ಳಿ ರೇವಣ್ಣ ,ಪಿಚ್ಚಿ ಕೋಟ್ರೇಶಪ್ಪ, ನರೇಗಲ್ ವೀರಣ್ಣ, ಬಣಕಾರ ದೇವಪ್ಪ, ಪಂಪಾಪತಿ ಗೌಡ್ರು ನಾಗಯ್ಯ ಹರಿಜನ ಕೊಟ್ರೇಶ್,ಹರಿಜನದ ಬಸವರಾಜ,ಹರಿಜನ ರಮೇಶ,ಚಿಂತ್ರಪಳ್ಳಿ ದುರುಗಪ್ಪ, ಚಿಮ್ನಹಳ್ಳಿ ನಾಗಪ್ಪ ದೇವಸ್ಥಾನದ ಅರ್ಚಕರಾದ ಬಡಿಗೇರ ಜಗದೀಶ ಮೇಘರಾಜ, ಜೋಗತಿಯರು ಸೇರಿದಂತೆ ಗ್ರಾಮದ ಗುರು ಹಿರಿಯರು ಮಹಿಳೆಯರು ಮಕ್ಕಳು ಯುವಕರು ಪಾಲ್ಗೊಂಡಿದ್ದರು.