ಮಾಲವಿ ಜಲಾಶಯ ವೀಕ್ಷಣೆಗೆ  ಬಂದ ಇಬ್ಬರು ಯುವಕರ ನೀರುಪಾಲು


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಸೆ.12: ತಾಲೂಕಿನ ಮಾಲವಿ ಜಲಾಶಯ ವೀಕ್ಷಣೆಗೆ ಬಂದ ಏಳು  ಯುವಕರಲ್ಲಿ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ.
 ಮೃತಪಟ್ಟ ಯುವಕರು ಕೊಟ್ಟೂರಿನ  ಚರಣ್ (29) ಇನ್ನೊಬ್ಬರು ಉಜ್ಜನಿಯ ಹಾಲೇಶ್ (30) ಎಂದು ಗುರುತಿಸಲಾಗಿದೆ.
 ಭಾನುವಾರ ರಜೆ ಇರುವುದರಿಂದ ಏಳು ಯುವಕರು ಹೊಸಪೇಟೆ ಟಿಬಿ ಡ್ಯಾಮ್ ನೋಡಿಕೊಂಡು ಸಂಜೆ ಮಾಲವಿ ಜಲಾಶಯ ನೋಡಲು ಬಂದು  ಹಿನ್ನೀರಿನಲ್ಲಿ ನೀರಿಗೆ ಇಳಿದು ಈಜಲು ಹೋದಾಗ ಇಬ್ಬರೂ ನೀರಿನಲ್ಲಿ   ಮುಳುಗಿ ಮೃತಪಟ್ಟಿದ್ದಾರೆ. ಇವರಲ್ಲಿ ಒಬ್ಬರು ಶಿಕ್ಷಕ ಮತ್ತು ಮತ್ತೊಬ್ಬರು ಪೋಸ್ಟ್ ಮ್ಯಾನ್ ಎಂದು ತಿಳಿದುಬಂದಿದೆ.
 ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸ್ ಠಾಣೆಯ ಸಿಪಿಐ ಮಂಜಣ್ಣ, ಪಿಎಸ್ಐ ಸರಳಾ ಭೇಟಿ ನೀಡಿ ನೀರುಪಾಲಾದ ಇಬ್ಬರನ್ನು ಶೋಧ ಕಾರ್ಯಕ್ಕೆ. ರಾತ್ರೆಯಿಂದ ಪ್ರಯತ್ನಿಸಿದರು ಮೃತದೇಹ ಸಿಕ್ಕಿರಲಿಲ್ಲ ಬೆಳಿಗ್ಗೆ 6 ಗಂಟೆಯಿಂದ ಅಗ್ನಿಶಾಮಕ ದಳ ಹಾಗೂ ಮೀನುಗಾರರು ಮೃತದೇಹ ಕಾರ್ಯಚರಣೆ ನಡೆಸಿದಾಗ  ಚರಣ್ ಎಂಬುವರ ಜೊತೆ ದೇಹ ಪತ್ತೆಯಾಗಿದೆ. ಇನ್ನೊಬ್ಬ ಹಾಲೇಶ್ಎಂಬ ಯುವಕನ ಮೃತದೇಹ ಪತ್ತೆ ಕಾರ್ಯ ಚರಣೆ ನಡೆದಿದೆ.