ಮಾಲವಿ ಜಲಾಶಯಕ್ಕೆ 19 ಅಡಿ ನೀರು


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಸೆ.09 ತಾಲೂಕಿನ ಜೀವನಾಡಿ ಮಾಲವಿ ಜಲಾಶಯಕ್ಕೆ ಮಳೆಯಿಂದ 19 ಅಡಿ ನೀರು ಹರಿದು ಬಂದಿದೆ.
ದಶಕಗಳಿಂದ ನೀರು ಕಾಣದೆ ಬರಡಾಗಿದ್ದ ಮಾಲವಿ ಜಲಾಶಯ ಈ ಬಾರಿ ಮಳೆಯ ಪ್ರಮಾಣ ಜಾಸ್ತಿ ಆಗಿರುವುದರಿಂದ ಹಲವಾರು ಹಳ್ಳಗಳ ಮೂಲಕ ನೀರು ಸಂಗ್ರಹವಾಗಿದೆ. ಜೊತೆಗೆ ಏತ ನೀರಾವರಿ ಮೂಲಕ ಶಾಶ್ವತ ನೀರಿನ ತುಂಗಭದ್ರಾ ನದಿಯು ಕೂಡ ಜಲಾಶಯಕ್ಕೆ ನೀರು ಹರಿದಿದೆ.
ರೈತರ ಜೀವನಾಡಿ ಎಂದೇ ಹೆಸರಾಗಿರುವ ಮಾಲವಿ ಜಲಾಶಯ ನೀರು ಸಂಗ್ರಹವಾಗುವುದನ್ನು ನೋಡಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಈ ಜಲಾಶಯದ ಹಿನ್ನೀರಿನ ಗ್ರಾಮಗಳಾದ ಉಲವತ್ತಿ ನೆಲ್ಕುದ್ರಿ ಹಂಚಿನಾಳ ಚಿಮ್ಮನಹಳ್ಳಿ ಭಾಗದ ರೈತರ ಬೋರ್ ವೆಲ್ ಗಳ ನೀರು ಜಾಸ್ತಿಯಾಗುತ್ತದೆ. ಸಮೃದ್ಧ ನೀರಾವರಿ ಕೂಡ ಆಗಬಹುದು. ಕುರಿ ದನಕರುಗಳಿಗೆ ಕುಡಿಯಲು ನೀರು ಕೂಡ ಅನುಕೂಲವಾಗುತ್ತದೆ.
ಮುಂದಿನ ದಿನಗಳಲ್ಲಿ ಜಲಾಶಯ ಭರ್ತಿಯಾಗಿ ಪ್ರವಾಸಿಗರನ್ನು ತನ್ನ ಕಡೆ ಸೆಳೆಯುವಂಥ ಆಗಬಹುದು. ಮಾಲವಿ ಜಲಾಶಯ ಸುತ್ತಮುತ್ತ ಜಾಲಿ ಮುಳ್ಳು ಗಿಡಗಂಟೆಗಳಿಂದ ತುಂಬಿಕೊಂಡು ಬಹಳ ಶಾಂದ್ರಿ ಉಂಟುಮಾಡಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಈ ಭಾಗದಲ್ಲಿ ಸ್ವಚ್ಛವಾಗಿ ಒಂದು ಸುಂದರ ಪ್ರವಾಸಿ ತಾಣವನ್ನು ನಿರ್ಮಿಸಿದರೆ ಪ್ರವಾಸಿಗರು ಖುಷಿಯಿಂದ ಸಂತೋಷದಿಂದ ಜಲಾಶಯವನ್ನು ವೀಕ್ಷಿಸಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಊಟ ಮಾಡಲು ಅನುಕೂಲವಾಗುತ್ತದೆ.