ಮಾಲವಿ ಗ್ರಾಮದಲ್ಲಿ ವಿಜೃಂಭಣೆಯಿಂದ  ಕಳಶರೋಹಣ ಮೂರ್ತಿ ಪ್ರತಿಷ್ಠಾಪನಾ                         

                                                  
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ . ಸೆ.01 ತಾಲೂಕಿನ ಮಾಲವಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಗೋಪುರದ ಕಳಶರೋಹಣ ಕಾರ್ಯಕ್ರಮ ಹಾಗೂ ಈಶ್ವರ ದೇವಸ್ಥಾನದಲ್ಲಿ ಶ್ರೀ ಈಶ್ವರ ದೇವರ ಮೂರ್ತಿ ಹಾಗೂ ಗಣೇಶನ ಮೂರ್ತಿ ಪ್ರತಿಷ್ಠಾಪಿಸುವ ಕಾರ್ಯಕ್ರಮ ಗುರುವಾರ  ಜರುಗಿತು.
ಕಳಸಾರೋಹಣ ಮತ್ತು ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನಗಳಿಗೆ ದೀಪಾ ಅಲಂಕಾರ ಬಗೆಬಗೆ ಹೂವಿನ ಅಲಂಕಾರದೊಂದಿಗೆ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.   
ಶ್ರೀ ಆಂಜನೇಯ ದೇವಸ್ಥಾನ ವಿಶೇಷ ಪೂಜೆ ಶ್ರೀ ಈಶ್ವರ ದೇವಸ್ಥಾನದಲ್ಲಿ ಹೋಮ ಹವನ  ಅಭಿಷೇಕ ಪೂಜಾ ಕೈಂ ಕಾರ್ಯಗಳು ಜರುಗಿದವು.ಡೊಳ್ಳು ಸಮಾಳ ನಂದಿ ಕೋಲು ಇನ್ನಿತರ ವಾದ್ಯ ಮೇಳಗಳೊಂದಿಗೆ ಸಡಗರ ಸಂಭ್ರಮದೊಂದಿಗೆ  ಗ್ರಾಮದ ಪ್ರಮುಖ ಬೀದಿಯಲ್ಲಿ ದೇವಸ್ಥಾನಗಳ ಕಳಶಗಳನ್ನು ಮೆರವಣಿಗೆ ಮಾಡಲಾಯಿತು. ಗ್ರಾಮದ ಜನರು ಹೂವು ಹಣ್ಣು ತೆಂಗಿನಕಾಯಿ ದೇವರಿಗೆ ಸಮರ್ಪಿಸಿ ಭಕ್ತಿಯನ್ನು ಸಲ್ಲಿಸಿದರು.  ಈ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ಜನರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.ಮಾಲವಿ ಗ್ರಾಮದ ದೈವಸ್ಥರು ಗುರು ಹಿರಿಯರು ದೇವಸ್ಥಾನಗಳ ಅರ್ಚಕರು, ಮಹಿಳೆಯರು ಮಕ್ಕಳು ಯುವಕರು ಗ್ರಾಮದ ನಾಗರಿಕರು ಪಾಲ್ಗೊಂಡಿದ್ದರು.