ಬೀದರ:ಜೂ.7: ಸನ್‍ರೈಸ್ ವಿಶ್ವವಿದ್ಯಾಲಯ ರಾಮಗರ್ ಜಿಲ್ಲಾ ಅಲ್ವರ್ (ರಾಜಸ್ಥಾನ) ವಿಶ್ವವಿದ್ಯಾಲಯದಿಂದ “ಸ್ವಾತಂತ್ರ್ಯೋತ್ರರ ಭಾರತೀಯ ಆಂಗ್ಲ ಕಾಂದಬರಿಗಳಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಸ್ತ್ರಿವಾದಿ ವಿಧಾನ” ಎಂಬ ಅಧ್ಯಯನ ಕುರಿತು ಸಂಶೋಧನೆಯನ್ನು ಡಾ. ವಿಭಾ ಗುಪ್ತಾ, ಪ್ರೊಫೇಸರ್ ಸನ್‍ರೈಸ್ ವಿಶ್ವವಿದ್ಯಾಲಯ ರಾಮಗರ್ ಜಿ. ಅಲ್ವರ್ (ರಾಜಸ್ಥಾನ) ಇವರ ಮಾರ್ಗದರ್ಶನದಲ್ಲಿ ಶ್ರೀಮತಿ ಮಾರ್ಥಾ ಬಿ. ರವರಿಗೆ ಡಾಕ್ಟರೇಟ್ ಪದವಿಯನ್ನು ಸನ್‍ರೈಸ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪಂಕಜ್ ಗುಪ್ತಾ ರವರ ಅಮೃತ ಹಸ್ತಗಳಿಂದ ನೀಡಲಾಯಿತು.