ಮಾರ್ಟಿನ್ ಟೀಸರ್ ದಾಖಲೆ

ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ” ಮಾರ್ಟಿನ್” ಟೀಸರ್ ಅನಾವರಣವಾಗಿದ್ದು ದಾಖಲೆ ನಿರ್ಮಿಸಿದ್ದು 70 ದಶಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಪಡೆದಿದೆ. “ಅದ್ದೂರಿ” ಚಿತ್ರದ ಬಳಿಕ ನಟ ದೃವ ಸರ್ಜಾ ಮತ್ತು ಎಪಿ ಅರ್ಜುನ್ ಜೋಡಿಯ ಎರಡನೇ ಚಿತ್ರ ಇದು.

ಚಿತ್ರಕ್ಕೆ ಕಥೆ ನೀಡಿರುವ ಹಿರಿಯ ನಟ ಅರ್ಜುನ್ ಸರ್ಜಾ ಸೇರಿದಂತೆ ಮತ್ತಿತರು ಆಗಮಿಸಿ ಚಿತ್ರಕ್ಕೆ ಮತ್ತೆ ತಂಡಕ್ಕೆ ಶುಭ ಹಾರೈಸಿದರು. ಈ ವೇಳೆ ಮಾತಿಗಿಳಿದ ನಿರ್ದೇಶಕ ಎಪಿ ಅರ್ಜುನ್,”ಮಾರ್ಟಿನ್” ಪಕ್ಕಾ ಆಕ್ಷನ್ ಚಿತ್ರ. ಇಷ್ಟು ದಿನ ಕರ್ನಾಟಕದಲ್ಲಿ ಮಾತ್ರ ಪರೀಕ್ಷೆ ಬರೆಯುತ್ತಿದ್ದೆವು.ಪ್ಯಾನ್ ಇಂಡಿಯಾ ಚಿತ್ರ. ಎಲ್ಲರನ್ನು ಮೆಚ್ಚಿಸುವ ಜವಾಬ್ದಾರಿ ನಮಗಿದೆ. ಟೀಸರ್‍ಗೆ ಸಿಗುತ್ತಿರುವ ಪ್ರತಿಕ್ರಿಯೆಗೆ ತುಂಬಾ ಖುಷಿಯಾಗಿದೆ ಎಂದರು.

ನಾಯಕ ದೃವ ಸರ್ಜಾ ಮಾಹಿತಿ ನೀಡಿ ರಾಮ್ -ಲಕ್ಷ್ಮಣ್ ಸೇರಿ ಸಾಹಸ ನಿರ್ದೇಶಕರ ಸಹಕಾರದಿಂದ ಸಾಹಸ ದೃಶ್ಯಗಳು ಚೆನ್ನಾಗಿದೆ.  ಅಭಿಮಾನಿಗಳು ತೋರುತ್ತಿರುವ ಪ್ರೀತಿ ಹಾಗೂ ಅವರು ಆಡುತ್ತಿರುವ ಮೆಚ್ಚುಗೆಯ ಮಾತುಗಳಿಗೆ ಮನ ತುಂಬಿ ಬಂದಿದೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ ಎಂದರು

ನಟ ಅರ್ಜುನ್ ಸರ್ಜಾ ಮಾತನಾಡಿ, ಧ್ರುವನಿಗೆ ಕಥೆ ಒಪ್ಪಿಸುವುದು ಸುಲಭವಲ್ಲ.ಚಿತ್ರಕ್ಕಾಗಿ ತುಂಬಾ ಶ್ರಮ ಪಡುತ್ತಾನೆ. ನಿದ್ದೆ ಕೂಡ ಸರಿಯಾಗಿ ಮಾಡಲ್ಲ. ನಮ್ಮ ಕುಟುಂಬದವರಿಗೆ ಧ್ರುವ ಎಂದರೆ ಪ್ರೀತಿ. ಅದರಲ್ಲೂ ತಾಯಿಗೆ ಧ್ರುವ ಎಂದರೆ ತುಂಬಾ ಪ್ರೀತಿ. ಅವರು ಇವತ್ತು ಇದ್ದಿದ್ದರೆ  ಖುಷಿ ಪಡುತ್ತಿದ್ದರು ಎನ್ನುವ ಮಾಹಿತಿ ಹಂಚಿಕೊಂಡರು.

ನಿರ್ಮಾಪಕ ಉದಯ್ ಕೆ ಮೆಹ್ತಾ, ನಾಯಕಿಯರಾದ ವೈಭವಿ ಶಾಂಡಿಲ್ಯ, ಅನ್ವೇಷಿ ಜೈನ್, ಛಾಯಾಗ್ರಾಹಕ ಸತ್ಯ ಹೆಗಡೆ, ಸಾಹಸ ನಿರ್ದೇಶಕರಾದ ರಾಮ್ -ಲಕ್ಷ್ಮಣ್ ಮಾಹಿತಿ ನೀಡಿದರು.