ಮಾರ್ಚ್ 15 ರಂದು ವಿಜಯಸಂಕಲ್ಪ ಯಾತ್ರೆ ವಿಜಯನಗರಕ್ಕೆ


ಸಂಜೆವಾಣಿ ವಾರ್ತೆ
ಹೊಸಪೇಟೆ :ಮಾ,14- ಮಾರ್ಚ್ 15ರಂದು ವಿಜಯಸಂಕಲ್ಪಯಾತ್ರೆ ವಿಜಯನಗರ ಕ್ಷೇತ್ರದಲ್ಲಿ ಸಂಚಾರ ಮಾಡಲಿದೆ  ಎಂದು ಜಿಲ್ಲಾ ಮಾಧ್ಯಮ ಸಂಚಾಲಕ ಅನಂತಪದ್ಮನಾಭ ತಿಳಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಂಡೂರಿನಿಂದ ಕೂಡ್ಲಿಗಿಗೆ ಮಾರ್ಚ್ 15ರಂದು  ಆಗಮಿಸುವ ಮೂಲಕ ವಿಜಯನಗರಕ್ಕೆ ಆಗವಿಸಲಿದೆ.
ಕೂಡ್ಲಿಗಿ ಗೆ ಮಧ್ಯಾಹ್ನ12ಕ್ಕೆ ಆಗಮಿಸಲಿದ್ದು, ನಂತರ ಹಗರಿಬೊಮ್ಮನಹಳ್ಳಿ ಯಲ್ಲಿ ಕಾರ್ಯಕ್ರಮ ರಾತ್ರಿ ಹೊಸಪೇಟೆಯಲ್ಲಿ ವಾಸ್ತವ್ಯಮಾಡಲಿದೆ, ಮಾರ್ಚ್16ರಂದು ಡಾ. ಪುವೀತರಾಜಕುಮಾರ್ ವೃತ್ತದಲ್ಲಿ ನಂತರ ಹೊಸಪೇಟೆ ವಿವಿದಸ್ಥಳಗಳಲ್ಲಿ ಸಂಚಾರ ಮಾಡಿ,  ಹರಪನಹಳ್ಳಿ ತೆರಳಲಿದೆ ಎಂದು ಮುಂಬರುವ ಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರದ‌ ಸಾಧನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಂಕಲ್ಪಿಸಲಾಗುವುದು ಎಂದರು.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ನ್  ಸೇರಿದಂತೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್  ರಾಜ್ಯನಾಯಕರು ಪಾಲ್ಗೊಳಲಿದ್ದಾರೆ ಎಂದರು.
ಪಕ್ಷದ ಮುಖಂಡರಾದ ಕವಿತಾ ಈಶ್ವರ ಸಿಂಗ್,  ಅಯ್ಯಾಳಿ ತಿಮ್ಮಪ್ಪ,    ವ್ಯಾಸನಕೇರಿ,  ಶ್ರೀನಿವಾಸ, ಜೀವರತ್ನಂ, ಮಾಧ್ಯಮ ಸಂಚಾಲಕಿ ಅನುರಾದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.