
ಕೋಲಾರ,ಮಾ,೨-ಭಾರತೀಯ ವಿಜಯ ಸಂಕಲ್ಪ ಯಾತ್ರೆಯನ್ನು ಮಾರ್ಚ್ ೧ ರಂದು ರಾಜ್ಯದ ೪ ಭಾಗಗಳಿಂದ ಚಾಲನೆ ನೀಡಲಾಗುವುದು, ಮಾ ೨೦ರವರೆಗೆ ಮೆಗಾ ರ್‍ಯಾಲಿಯು ರಾಜ್ಯದ ೩೧ ಜಿಲ್ಲೆಗಳ ೨೨೪ ವಿಧಾನ ಸಭಾ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷದ ಮಹತ್ತ್ವಾಕಾಂಕ್ಷಿಯಾದ ವಿಜಯ ಸಂಕಲ್ಪ ಯಾತ್ರೆಯು ಸಂಚರಿಸಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಒಳ್ಳೆ ಕೆಲಸ ಆರಂಭಿಸುವ ಮಾಡುವ ಮೊದಲು ನಮ್ಮ ಸಂಸ್ಕೃತಿ ಹಾಗೂ ಸಂಪ್ರಾದಯ ಪ್ರಕಾರ ಚುನಾವಣೆಗೆ ಜನಾಶೀರ್ವಾದ ಮತ್ತು ಬೆಂಬಲ ಪಡೆಯಲು ಈ ವಿಜಯ ಸಂಕಲ್ಪ ಯಾತ್ರೆಯನ್ನು ಆಯೋಜಿಸಿದೆ ಎಂದು ಹೇಳಿದರು.
ವಿಜಯ ಸಂಕಲ್ಪ ಯಾತ್ರೆಗೆ ಮಾ ೧ ರಂದು ಮಲೆ ಮಹದೇಶ್ವರ ಬೆಟ್ಟ ಹನೂರು ತಾಲ್ಲೂಕಿನಲ್ಲಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಲಿದ್ದಾರೆ. ಮಾ,೨ರಂದು ನಂದಘಡದ ಸಂಗೊಳ್ಳಿ ರಾಯಣ್ಣ ಸ್ವಾರಕದ ಬಳಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ.ಮಾ ೩ರಂದು ಬೀದರ್‌ನ ಬಸವ ಕಲ್ಯಾಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪದ ಬಳಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಚಾಲನೆ ಸಿಗಲಿದೆ. ಇದೇ ದಿನ ಬೆಂಗಳೂರಿನ ದೇವನಹಳ್ಳಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಯಿಂದ ಯಾತ್ರೆಗೆ ಸಚಿವ ಅಮಿತ್ ಷಾ ಅವರೇ ಚಾಲನೆ ನೀಡಲಿದ್ದಾರೆ ಎಂದರು,
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಎಸ.ಬಿ.ಮುನಿವೆಂಕಟಪ್ಪ, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ತಾಲ್ಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ತ, ನಗರ ಅಧ್ಯಕ್ಷ ತಿಮ್ಮರಾಯಪ್ಪ, ಮಾಧ್ಯಮ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ, ಸಂಚಾಲಕ ಸತ್ಯನಾರಾಯಣರಾವ್ ಇದ್ದರು.