ಮಾರ್ಚ್ ೨೬-ಅಮಿತ್ ಷಾ, ಜೋಷಿ, ಮುಖ್ಯಮಂತ್ರಿ ಆಗಮನ

ರಾಯಚೂರು,ಮಾ.೧೮- ಜಿಲ್ಲೆಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮಾಡಲು ದಿ. ೨೬ರಂದು ದೇವದುರ್ಗ ತಾಲೂಕಿನ ಗಬ್ಬೂರಿಗೆ ಕೇಂದ್ರ ಗೃಹ ಮಂತ್ರಿ ಅಮಿತ್ ಷಾ, ಪ್ರಹ್ಲಾದ್ ಜೋಷಿ, ರಾಜ್ಯದ ಮುಖ್ಯಮಂತ್ರಿ,ವಿ.ಸೊಮ್ಮಣ್ಣ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ದೇವದುರ್ಗ ಶಾಸಕರಾದ ಶಿವನಗೌಡ ನಾಯಕ್ ತಿಳಿಸಿದರು.
ಇಂದು ನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲೆಗೆ ವಿವಿಧ ಕಾಮಗಾರಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಶ್ರಮಪಟ್ಟು ಸುಮಾರು ೬೫೦೦ಕೋಟಿ ಅನುದಾನ ಬಿಡುಗಡೆ ಮಾಡಿಸಲಾಗಿದೆ,ಹಲವಾರು ಕಾಮಗಾರಿಗಳು ಇವೆ ಅವುಗಳ ಶಂಕು ಸ್ಥಾಪನೆಗೆ ಆಗಮಿಸಲಿದ್ದಾರೆ ಕಾರ್ಯಕ್ರಮ ೨೬ ರ ಭಾನುವಾರ ಮುಂಜಾನೆ ೧೦ಗಂಟೆಗೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ರಾಯಚೂರು ನಗರಕ್ಕೆ ಆಗಮಿಸಬೇಕಿದ್ದ ನಾಯಕರು ತಾಂತ್ರಿಕ ಕಾರಣದಿಂದ ನಗರಕ್ಕೆ ಆಗಮಿಸುತ್ತಿಲ್ಲ ಹಾಗಾಗಿ ಗಬ್ಬೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಲಾಗುವುದು ನಗರ ಶಾಸಕರಾದ ಡಾ.ಶಿವರಾಜ ಎಸ್ ಪಾಟೀಲ್ ತಿಳಿಸಿದರು.
ಪ್ರಮುಖವಾಗಿ ಶಂಕು ಸ್ಥಾಪನೆಯಾಗಲಿರುವ ಕಾಮಗಾರಿಗಳು.
೨೮೦೦ ಕೋಟಿ ವೆಚ್ಚದ ಜಾಲದಾರೆ ಕಾಮಗಾರಿ, ಕೃಷಿ ಜಲನಿರ್ಮಾಣ ಯೋಜನೆಯಡಿಯಲ್ಲಿ ಕೆನಲ್ ಗಳ ನವಿಕರಣಕ್ಕೆ ೧೪೦೦ಕೋಟಿ ವೆಚ್ಚದ ಕಾಮಗಾರಿ.
೭೫೨ ಕೋಟಿ ವೆಚ್ಚದಲ್ಲಿ ನಾರಾಯಣಪುರ ಮುಖ್ಯ ನಾಲೆ ಕಾಮಗಾರಿ.
ಸಿರಿವಾರ -ದೇವದುರ್ಗ ರಸ್ತೆ, ರಾಂಪುರ ರಸ್ತೆ,೯ಕೋಟಿ ವೆಚ್ಚದ ಕಾಮಗಾರಿ.
ಲೋಕಪಯೋಗಿ ಇಲಾಖೆಯ ೭೦ಕೋಟಿ ಕಾಮಗಾರಿ.
೩೯ಕೆರೆಗಳ ಅಭಿವೃದ್ಧಿಗೆ ೧೦೬ಕೋಟಿ ವೆಚ್ಚದ ಕಾಮಗಾರಿ.
ಜಗಜೀವನ್ ರಾಮ್ ಭವನ, ಡಾ.ಅಂಬೇಡ್ಕರ್ ಭವನ, ವಾಲ್ಮೀಕಿ ಭವನಗಳ ಶಂಕು ಸ್ಥಾಪನೆ.
೮೦ಅಂಗನವಾಡಿ ಕೇಂದ್ರಗಳು, ಕಾಲೇಜು ಗಳ ಶಂಕು ಸ್ಥಾಪನೆ.
ಒಟ್ಟಾರೆ ದೇವದುರ್ಗ ಕ್ಷೇತ್ರಕ್ಕೆ ಸುಮಾರು ೩೧೦೦ಕೋಟಿ ವೆಚ್ಚದ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಲಿದ್ದಾರೆ.
ರಾಯಚೂರು ನಗರದ ವಿವಿಧ ಕಾಮಗಾರಿಗಳಲ್ಲಿ ಪ್ರಮುಖವಾಗಿರುವವು.
೨೧೬ಕೋಟಿ ವೆಚ್ಚದ ವಿಮಾನ ನಿಲ್ದಾಣಕ್ಕೆ ಶಂಕು ಸ್ಥಾಪನೆ, ೧೫೦ಕೋಟಿ ವೆಚ್ಚದ ಟೆಕ್ಸ್ ಟೈಲ್ ಪಾರ್ಕ್ ಗೆ ಶಂಕು ಸ್ಥಾಪನೆ, ೨೭ಕೋಟಿ ವೆಚ್ಚದ ನವೀಕರಣಗೊಂಡ ರಿಮ್ಸ್ ಕಟ್ಟಡ,
೧೬೦ಕೋಟಿ ವೆಚ್ಚದ ೨೪೭೩ ಮನೆಗಳಿಗೆ ಶಂಕು ಸ್ಥಾಪನೆ, ಡಿಗ್ರಿ ಟೆಕ್ನಿಕಲ್ ಕಾಲೇಜು, ೨೧೬ಕೋಟಿ ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ ಕಾಮಗಾರಿ.
ಹಾಗೂ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡಲಿದ್ದಾರೆ ಎಂದು ತಿಳಿಸಿದರು.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ತಿಪ್ಪರಾಜ್ ಹವಾಲ್ದಾರ್, ಶಂಕ್ರಪ್ಪ, ಹಾಗೂ ಕೊಟ್ರೇಶ್ ಕೋರಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.