ಮಾರ್ಚ್ ಅಂತ್ಯದ ವೇಳೆಗೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಗಡುವು: ನಿರ್ಮಾಲಾ

ನವದೆಹಲಿ, ನ. 10- ಮುಂದಿನ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ದೇಶದ ಎಲ್ಲ ಬ್ಯಾಂಕುಗಳು ತಮ್ಮ ಖಾತೆದಾರರ ಆಧಾರ್ ಸಂಖ್ಯೆಯನ್ನು ಅವರ ಬ್ಯಾಂಕ್ ಖಾತೆಗೆ ಜೋಡಿಸುವಂತೆ ನಿರ್ಮಲ ಸೀತಾರಾಮನ್ ಇಂದು ಗಡುವು ನೀಡಿದ್ದಾರೆ.

ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವುದರಿಂದ ಕೇಂದ್ರ ಸರ್ಕಾರದ ಸೌಲಭ್ಯಗಳು ಜನರಿಗೆ ಮತ್ತಷ್ಟು ವೇಗವಾಗಿ ತಲುಪಲು ಸಹಕಾರಿಯಾಗಲಿದೆ .ಈ ನಿಟ್ಟಿನಲ್ಲಿ ಮಾರ್ಚ್ 31ರ ವೇಳೆಗೆ ಜೋಡಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅವರು ಸೂಚಿಸಿದ್ದಾರೆ .

ಭಾರತೀಯ ಬ್ಯಾಂಕ್ ಸಂಘದ 73ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದೇಶದ ಎಲ್ಲ ಬ್ಯಾಂಕ್ ಗಳು 2021ರ ಮಾರ್ಚ್ 31ರ ಒಳಗೆ ಬ್ಯಾಂಕ್ ಖಾತೆಗೆ ಆಧಾರ್ ಮತ್ತು ಮಾಡುವುದು ಕಡ್ಡಾಯ ಎಂದು ಹೇಳಿದ್ದಾರೆ.

ಬ್ಯಾಂಕ್ ಖಾತೆದಾರ ತಮ್ಮ ಆಧಾರ್ ಸಂಖ್ಯೆಯನ್ನು ನೋಂದಣಿ ಮಾಡುವುದಿಲ್ಲವೋ ಅಂತಹ ಖಾತೆದಾರರಿಗೆ ಡಿಜಿಟಲ್ ಪಾವತಿ ಸೇರಿದಂತೆ ಇನ್ನಿತರ ಯಾವುದೇ ಸೌಲಭ್ಯವನ್ನು ನೀಡಬಾರದು ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವುದು ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.

ಬ್ಯಾಂಕ್ ಹಳು ರುಪೆ ಕಾರ್ಡ್‌ಗಳನ್ನು ಹೆಚ್ಚು ಬಳಕೆ ಮಾಡುವಂತೆ ಗ್ರಾಹಕರಲ್ಲಿ ಅರಿವು ಮತ್ತು ಉತ್ತೇಜನ ಮೂಡಿಸಬೇಕು ನಲ್ಲಿ ಕ್ರಮಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲಿ ಕೊರೋನಾ ಸೋಂಕಿನ ಬಳಿಕ ಬ್ಯಾಂಕಿಂಗ್ ವಲಯ ಚೇತರಿಸಿಕೊಳ್ಳುತ್ತಿದೆ ಈ ನಿಟ್ಟಿನಲ್ಲಿ ಇನ್ನಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ