ಮಾರ್ಚಿ 27 ರಂದು ವಿಶ್ವ ರಂಗಭೂಮಿ ದಿನಾಚರಣೆ

ಚಿತ್ರದುರ್ಗ.ಮಾ.೨೪ : ರಂಗಸೌರಭ ಕಲಾ ಸಂಘ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಇಂಗಳದಾಳು ಗ್ರಾಮದ ತಳವಾರ ಸಂಚಾಲಪ್ಪ ನಾಯಕರ ಪ್ರೌಢಶಾಲೆ ಆವರಣದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಹಮ್ಮಿಕೊಂಡಿದೆ.ಮಾರ್ಚ್ 27 ರಂದು ಬೆಳಿಗ್ಗೆ 10-30 ಕ್ಕೆ ತಾರಾಮಂಡಲ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಚಳ್ಳಕೆರೆ ರ‍್ರಿಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯಶಿಕ್ಷಕ ಹಾಗೂ ವಿಜ್ಞಾನಿ ಎಚ್.ಎಸ್.ಟಿ ಸ್ವಾಮಿ ಅಧ್ಯಕ್ಷತೆ ವಹಿಸುವರು. ಕ.ಸಾ.ಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಆರ್.ಮಲ್ಲಿಕಾರ್ಜುನಯ್ಯ, ಕನ್ನಡ ಪಂಡಿತ ತೇಜಸ್ವಿ, ಶಿಕ್ಷಕರಾದ ಡಿಆರ್.ಚಕ್ರಪಾಣಿ, ಜಿಪಿ.ಆನಂದಕುಮಾರ್, ಎಲ್.ನಾರಾಯಣಸ್ವಾಮಿ, ಕೆಬಿ.ತಿಪ್ಪೇಸ್ವಾಮಿ, ಎಂ.ರAಗನಾಥ, ಹೆಚ್.ಧನಂಜಯಪ್ಪ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.ಶಿಕ್ಷಣ ಶಾಸ್ತçದ ಪ್ರಾಧ್ಯಾಪಕ ಡಾ.ವಿ.ಬಸವರಾಜ್ ರಂಗಭೂಮಿಯ ಸಾಧ್ಯತೆಗಳ ವಿಷಯವಾಗಿ ಉಪನ್ಯಾಸ ನೀಡುವರು. ರಂಗ ನಿರ್ದೇಶಕ ಕೆಪಿಎಂ. ಗಣೇಶಯ್ಯ 2021ರ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ರಂಗಕರ್ಮಿ ಯುನೈಟೆಡ್ ಕಿಂಗ್‌ಡಮ್‌ನ ಹೆಲನ್ ಮರ‍್ರೇನ್ ವಿರಚಿತ ರಂಗ ಸಂದೇಶ ಓದುವರು. ರಂಗಸೌರಭ ಕಲಾವಿದರು ರಂಗ ಸಂಗೀತ ನಡೆಸುವರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.