ಮಾರ್ಚನಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ

ಕಲಬುರಗಿ:ಫೆ.20: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲಿμï ವಿಭಾಗವು ಇದೆ ಮಾರ್ಚ್ 6 ಮತ್ತು 7 ರಂದು “ಪ್ರದರ್ಶನ ಕಲೆಗಳ ಹೊಸ ಸಾಧ್ಯತೆಗಳು ಮತ್ತು ಪ್ರಯೋಗಗಳು” ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸುತ್ತಿದೆ. ಇಂದು ವಿಚಾರ ಸಂಕಿರಣದ ಕರಪತ್ರವನ್ನು ಸಿಯುಕೆಯ ಗೌರವಾನ್ವಿತ ಕುಲಪತಿಗಳಾದ ಪೆÇ್ರ.ಬಟ್ಟು ಸತ್ಯನಾರಾಯಣ ಬಿಡುಗಡೆ ಮಾಡಿದರು.
ಇದೆ ಸಂದರ್ಭದಲ್ಲಿ ಬಳ್ಳಾರಿಯ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪೆÇ್ರ.ಅನಂತ್ ಎಲ್ ಝಂಡೇಕರ್, ಸಿಯುಕೆಯ ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ್, ಪರೀಕ್ಷಾ ನಿಯಂತ್ರಕ ಕೋಟ ಸಾಯಿಕೃಷ್ಣ, ಶೈಕ್ಷಣಿಕ ನಿರ್ದೇಶಕರು ಮತ್ತು ಮುಖ್ಯಸ್ಥರು ಇಂಗ್ಲಿμï ವಿಭಾಗ ಪೆÇ್ರ.ಬಸವರಾಜ ಪಿ. ಡೋಣೂರು, ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿಗಳು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.
ಎರಡು ದಿನಗಳ ರಾಷ್ಟ್ರೀಯ ಸಮ್ಮೆಳನ ಸಂಸ್ಕøತಿ, ಇತಿಹಾಸ, ರಾಜಕೀಯ, ಲಿಂಗ, ಕಲೆ, ಜನಾಂಗಶಾಸ್ತ್ರ ಮತ್ತು ದೈನಂದಿನ ಜೀವನ ಕುರಿತ ವಿಷಯಗಳ ಬಗ್ಗೆ ಚರ್ಚಿಸಲಿದೆ. ಸಮ್ಮೆಳನದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಪ್ರಸಿದ್ಧ ವಿದ್ವಾಂಸರನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ, ನೀವು www.cuk.ac.in ನಲ್ಲಿ ಫ್ಲ್ಯಾಶ್ ನ್ಯೂಸ್‍ಗೆ ಭೇಟಿ ನೀಡಬಹುದು ಮತ್ತು ಸೆಮಿನಾರ್ ಕುರಿತು ಯಾವುದೇ ಹೆಚ್ಚುವರಿ ಮಾಹಿತಿಗೆ ಡಾ ಆಶಿಶ್ ಬೆಳಮ್ಕರ್ (9538555075) ಅವರನ್ನು ಸಂಪರ್ಕಿಸಬಹುದಾಗಿದೆ.