ಮಾರ್ಗಸೂಚಿ ಉಲ್ಲಂಘನೆ: ೨೪ ಮಳಿಗೆ ಮಾಲೀಕರ ವಿರುದ್ಧ ಎಫ್‌ಐಆರ್

ರಾಯಚೂರು,ಏ.೨೮- ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ತರಲು ಸರ್ಕಾರ ಹಲವು ಮಾರ್ಗಸ್ರಚಿಗಳನ್ನು ಪ್ರಕಟಿಸಿದೆ, ಅದರಲ್ಲಿ ಅವಶ್ಯ ಸೇವೆಗಳನ್ನು ಹೊರತು ಪಡಿಸಿ ಇತರೆ ಸೇವೆಗಳನ್ನು ನೀಡುವ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಲು ಆದೇಶ ನೀಡಿದೆ, ಈ ಕುರಿತು ರಾಯಚೂರು ನಗರದಲ್ಲಿ ಧ್ವನಿವರ್ಧಕಗಳ ಹಾಗೂ ಇತರೆ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲಾಗಿದ್ದರೂ, ಅನಾವಶ್ಯಕ ಸೇವೆಗಳನ್ನು ನೀಡುವ ವರ್ತಕರು ಏ.೨೬ರ ಬೆಳಿಗ್ಗೆ ೧೧ ರಿಂದ ೧ ಗಂಟೆಯ ವೇಳೆಗೆ ಅಂಗಡಿ ಮುಂಗಟ್ಟು ತೆರೆದು ಕಾನೂನನ್ನು ಉಲ್ಲಂಘಿಸಿ ವ್ಯಾಪಾರ ವಹಿವಾಟಿನಲ್ಲಿ ತೊಡಗುವ ಮೂಲಕ ಕೋವಿಡ್-೧೯ ವೈರಾಣು ತಡೆಯುವಲ್ಲಿ ಅಸಹಕಾರ ತೋರಿದ್ದು, ಸಂಬಂಧಿಸಿದವರ ವಿರುದ್ದ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಜನರ ಗುಂಪು ಸೇರುವಿಕೆಯಿಂದ ಕೋವಿಡ್-೧೯ ಸೋಂಕು ಉಲ್ಬಣಿಸಲು ಹಾಗೂ ಸಾರ್ವಜನಿಕರ ಜೀವಕ್ಕೆ ತೊಂದರೆಯಾಗುವ ಸಂಭವವಿರುತ್ತದೆ, ಇದನ್ನು ಉಲ್ಲಂಘಿಸಿದ, ರಾಯಚೂರು ನಗರದ ೨೪ ವ್ಯಾಪಾರಿಗಳ ನಗರದ ಸದಾರ್ ಬಜಾರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಸ್ವತಃ ರಾಯಚೂರು ನಗರಸಭೆಯ ಪೌರಾಯುಕ್ತ ವೆಂಕಟೇಶ್ ಅವರೇ ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಏ.೨೬ರ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧ ಗಂಟೆವರೆಗೆ ಅನಗತ್ಯವಾಗಿ ಹೆಚ್ಚು ಸಂಖ್ಯೆಯ ಜನರನ್ನು ಸೇರುವಂತೆ ಮಾಡುವುದರೊಂದಿಗೆ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಐಪಿಸಿ ಕಲಂ ೨೬೯, ೨೭೦ ಹಾಗೂ ಕಲಂ ೫ (೧) ಕರ್ನಾಟಕ ಸಾಂಕ್ರಾಮಿಕ ರೋಗ ಕಾಯ್ದೆ-೧೮೯೭ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ-೨೦೦೫ರನ್ವಯ ಪ್ರಕರಣಗಳನ್ನು ದಾಖಲಿಸಲಾಗಿದೆ.
ಎಫ್‌ಐಆರ್ ದಾಖಲಾದ ಅಂಗಡಿ ಮತ್ತು ಮಾಲೀಕರ ಹೆಸರು ಇಂತಿವೆ:
ಬಟ್ಟೆ ಬಜಾರ್‌ನ ೧) ಎಸ್.ಸಿ.ಕೀರ್ತಿ ಆಂಡ್ ಸನ್ಸ್ ಮಾಲೀಕರಾದ ಅಮೃತ್ ಕೀರ್ತಿ, ೨) ಅಲಿಬಾಯಿ ಗೋಗಿ ಗಾಮೆಂಟ್ಸ್, ೩) ವಿನಯ್ ಕಿರಣ್ ಸ್ಟೋರ್‌ನ ಗೋವಿಂದ ರಾಜ್, ೪) ಡಾಟ್ಲಾ ಡ್ರಾಸಸ್‌ನ ಅಪ್ಪಿರೆಡ್ಡಿ, ೫) ರಾಘವೇಂದ್ರ ಹೋಟೆಲ್‌ನ ಮಹೇಶ, ೬) ಕರ್ನಾಟಕ ಮೆಡಿಕಲ್‌ನ ಜಾಫರ್ ಅಲಿ, ೭) ಡಾಕ್ಟರ್ ಬ್ಯಾಕ್ ಮ್ಯಾಟ್ರಿನ್ ಯೂನಿಕ್ ಎಂಟರ್ ಪ್ರೈಸಸ್‌ನ ಜಾಕೀರ್, ೮) ಬಂಗಿ ಕುಂಟಾದ ಸಾಕ್ಷಿ ಸಾರಿಸ್‌ನ ಶರಣಗೌಡ, ೯) ವರ್ಧಮಾನ ಕಂಫರ್ಟ್ಸ್ ಪ್ರೈ ಲಿ, ೧೦) ಹೋಸೈರ್ ಆಂಡ್ ಹ್ಯಾಂಡ್‌ಲ್ಯೂಮ್ಸ್ ಆಸೀಸ್‌ನ ಶ್ರೀಧರ್, ೧೧) ಜೈನ್ ಕಾಲೋನಿಯ ನರೇಶ ಬೋಹರಾ ರಿಶಬ್ ಬೋಹರಾ, ೧೨) ಬಂಗಿಕುಂಟಾದ ವಿಷ್ಣು ರಿಕ್ರಿಯೇಷನ್, ೧೩) ಬಂಗಿಕುಂಟಾದ ವಿಜಯ್ ಸಿಂಗ್, ೧೪) ಚಂದ್ರಮೌಳೇಶ್ವರ ವೃತ್ತದ ರಮಾಕಾಂತ್ ಡಿಜಿಟಲ್ ಶಾಪ್, ೧೫) ವಾಸವಿ ಆಪ್ಟಿಕಲ್ಸ್‌ನ ದಿನೇಶ ಕುಮಾರ, ೧೬) ಗುರು ಖಾದಿ ಭಂಡಾರನ ಸೋಮಶೇಖರ, ೧೭) ರಿಲಯನ್ಸ್ ಟೈಯರ್‌ನ ಖಾಜಾ ಹುಸೇನ್, ೧೮) ರಿಶಬ್ ಕೋಠಾರಿ ಎಲೆಕ್ಟ್ರಿಕಲ್ಸ್, ೧೯) ವಾಸವಿ ಡಿಜಿಟಲ್ ರಾಜು, ೨೦) ವಿಶ್ವನಾಥ ಮೆಡಿಕಲ್ಸ್, ೨೧) ನಂದಿ ಸ್ಪೆಷಲ್ ಲಸ್ಸಿ, ೨೨) ಡಿಎಝೆಡ್ ಎಂಟರ್ ಪ್ರೈಸಸ್, ೨೩) ನ್ಯೂ ಎವರ್ ಗ್ರೀನ್ ಹೇರ್ ಕಟ್ಟಿಂಗ್, ೨೪)ಹೆಚ್.ಎಂ.ಗ್ರಾಫಿಕ್‌ನ ಸುದರ್ಶನ ಇವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಏ.೨೬ರಂದು ೨೪ ನಿಯಮ ಉಲ್ಲಂಘನೆಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕೊರೋನಾ ಎರಡನೇ ಅಲೆ ನಿಯಂತ್ರಿಸಲು ಸರ್ಕಾರ ಹೊರಡಿಸಿರುವ ಮಾರ್ಗಸ್ರಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಇಲ್ಲದಿದ್ದಲ್ಲೀ ಇದೇ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಸಜ್ಜಾಗಿದೆ.