ಮಾರುಕಟ್ಟೆ ಸುಧಾರಣೆಗೆ 15ದಿನದ ಗಡುವು


ಹುಬ್ಬಳ್ಳಿ,ಜ.3: ಅಧಿಕಾರಿಗಳ ನಿರ್ಲಕ್ಷ?ಯದಿಂದ ಹುಬ್ಬಳ್ಳಿ ಮಾರುಕಟ್ಟೆ ಸಂಪೂರ್ಣ ಹಾಳಾಗಿದೆ. ಅಸರ್ಮಪಕ ಪಾರ್ಕಿಂಗ್ ವ್ಯವಸ್ಥೆ, ರಸ್ತೆ, ಫುಟ್‍ಪಾತ್ ಒತ್ತುಒರಿಯಾದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಂತಿದೆ. 15ದಿನದಲ್ಲಿ ಮಾರುಕಟ್ಟೆ ಸುಧಾರಣೆಗೆ ಕ್ರಮ ವಹಿಸಬೇಕು. ಇಲ್ಲವಾದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಅವರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಮೇಲಿನ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಸೂಚನೆ ನೀಡಿದರು.
ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಇರುವ ಕಟ್ಟಡಗಳ ಮಾಲೀಕರಿಗೆ ಕೂಡಲೇ ನೋಟಿಸ್ ಜಾರಿ ಕಟ್ಟಡವನ್ನು ಸೀಜ್ ಮಾಡಿ, ಶಿಥಿಲಾವಸ್ಥೆಯಲ್ಲಿರುವ ಜಿಗಳೂರು ಕಟ್ಟಡದ ಕ್ಷಮತೆ ಪರಿಶೀಲಿಸಬೇಕು. ಗಣೇಶಪೇಟೆ ತರಕಾರಿ ಮಾರುಕಟ್ಟೆ ಬಳಿ ಇರುವ ಕಟ್ಟಡಗಳ ತೆರವುಗೊಳಿಸಲು ಶೀಘ್ರ ಕ್ರವಹಿಸಬೇಕು. ಬೀದಿಬದಿ ವ್ಯಾಪಾರಸ್ಥರಿಗೆ ಶಾಸ್ವತ ಪರಿಹಾರ ಕಲ್ಪಿಸಿ ಪ್ರತ್ಯೇಕ ಸುಸಜ್ಜಿತ ಮಾರುಕಟ್ಟೆ ಸ್ಥಾಪಿಸಬೇಕು. ಇದರೊಂದಿಗೆ ಮಾರುಕಟ್ಟೆ ಸೇರಿದಂತೆ ನಗರದ ಸಮಗ್ರ ನಿರ್ವಹಣೆಗೆ ಕೂಡಲೇ ಕಮಾಂಡ್ ಸೆಂಟರ್ ನಿರ್ಮಾಣ ಮಾಡುವಂತೆ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
5ಕೋಟಿ ರೂ.ವೆಚ್ಚದಲ್ಲಿ ಕಮಾಂಡ್ ಸೆಂಟರ್
ಮಾರುಕಟ್ಟೆ ಸೇರಿದಂತೆ ಕ್ಷೇತ್ರದ ಸಮಗ್ರ ನಿರ್ವಹಣೆಗೆ ಬಿಆರ್‍ಟಿಎಸ್ ಮಾದರಿ ಕಮಾಂಡ್ ಸೆಂಟರ್ ನಿರ್ಮಾಣ ಮಾಡಬೇಕು. ಅಗತ್ಯವಿರುವ ನಗರ, ಕಾಲೋನಿ, ಮಾರುಕಟ್ಟೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಎಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಲು ಇದು ಸಹಕಾರಿಯಾಗಲಿದೆ. ಇದರಿಂದ ಆಡಳಿತ ವ್ಯವಸ್ಥೆಯು ಉತ್ತಮವಾಗಿರಲಿದೆ. ಹೀಗಾಗಿ ಸೂಕ್ತ ಜಾಗದಲ್ಲಿ ಕಮಾಂಡ್ ಸೆಂಟರ್ ಸ್ಥಾಪನೆ ಮಾಡಬೇಕು. ಅದಕ್ಕೆ 5ಕೋಟಿ ರೂ. ವರೆಗೂ ಅನುದಾನ
18ಕೋಟಿ ರೂ.ದಲ್ಲಿ ಪಾರ್ಕಿಂಗ್ ಸಂಕೀರ್ಣ
ನಗರದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದಾಗಿದೆ. ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ಪ್ರದೇಶಗಳ ರಸ್ತೆಯ ಎರಡೂ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡಲಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಮಾರುಕಟ್ಟೆ ಪ್ರದೇಶದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಶಾಸಕ ವಿವರಿಸುತ್ತಿರುವಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ವಿಜಯ್‍ಕುಮಾರ್ ಈ ಹಿಂದೆ ತಾವು ಹೇಳಿದಂತೆ ಇಲ್ಲಿನ ಬ್ರಾಡ್‍ವೇದಲ್ಲಿರುವ ನಗರ ಪೆÇಲೀಸ್ ಠಾಣೆ ಎದುರು ಇರುವ ಪಾಲಿಕೆ ಒಡೆತನದ ಆಸ್ತಿಯಲ್ಲಿ 18ಕೋಟಿ ರೂ.ವೆಚ್ಛದಲ್ಲಿ ಬಹುಮಹಡಿ ಪಾರ್ಕಿಂಗ್ ಸಂಕೀರ್ಣ(ಕಾಂಪ್ಲೆಕ್ಸ್) ನಿರ್ಮಾಣಕ್ಕೆ ಈಗಾಗಲೇ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಡ್ಡು ಕಟ್ಟಿದ ಅಧಿಕಾರಿ ವರ್ಗ
ಅಸರ್ಮಪಕ ಕುಡಿಯುವ ನೀರು ಪೂರೈಕೆ, ಒಳಚರಂಡಿ ದುರವಸ್ಥೆ, ಕೊಳತೆ ನಾರುತ್ತಿರುವ ತೆರೆದ ಚರಂತೆ, ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿ ಹೀಗೆ ಕ್ಷೇತ್ರದಲ್ಲಿ ನೂರಾರು ಸಮಸ್ಯೆಗಳಿವೆ. ಪ್ರತಿದಿನ ಜನರ ದೂರಗಳು ಹೆಚ್ಚುತ್ತಲೇ ಇವೆ. ಆದರೆ, ಅಧಿಕಾರಿಗಳು ಮಾತ್ರ ಜಿಡ್ಡುಕಟ್ಟಿ ಕುಳಿತಜಾಗದಿಂದ ಕದಲುತ್ತಲೇ ಇಲ್ಲ. ಅಧಿಕಾರಿಗಳು ಕಚೇರಿಗೆ ಸೀಮಿತರಾದಂತೆ ಕಾಣುತ್ತಿದೆ. ಕುಳಿತ ಜಾಗದಿಂದಲೇ ಆಡಳಿತ ಮಾಡುವುದಲ್ಲ. ವಾರ್ಡ್ಗಳಿಗೂ ಭೇಟಿನೀಡಿ ಜನರ ಸಮಸ್ಯೆ ಆಲಿಸಿ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ನಿರಂತರವಾಗಿ ಭೇಟಿನೀಡಿ ಪರಿಶೀಲ ಮಾಡಬೇಕು. ನಿರ್ಲಕ್ಷ?ಯ ತೋರದೆ ದೂರುಗಳಿಗೆ ಸ್ಪಂದಿಸಿ. ಕೆಲಸ ಮಾಡಲು ಆಗದಿದ್ದರೆ ವರ್ಗಾವಣೆ ತೆಗೆದುಕೊಂಡು ಬೇರೆಡೆ ತೆರಳಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನ್ಯಾಷನಲ್ ಮಾರುಕಟ್ಟೆ ಮಾದರಿ ಸಂಕೀರ್ಣ ನಿರ್ಮಾಣ
ಪಾಲಿಕೆ ಕಾನೂನು ವಿಭಾಗ ದುರ್ಬಲ
ಪಾಲಿಕೆ ಕಾನೂನು ವಿಭಾಗವು ಬಹಳ ದುರ್ಬಲವಿದೆ. ಪಾಲಿಕೆ ಆಸ್ತಿಯನ್ನು ಬೇರೆ ಯಾರೋ ಬಳಸುತ್ತಿದ್ದಾರೆ. ಅಂಥ ಆಸ್ತಿಗಳನ್ನು ಪಾಲಿಕೆಗೆ ಮರಳಿ ಪಡೆಯುವಂತೆ ಸೂಚಿಸಲಾಗಿತ್ತು, ಆದರೆ, ಯಾವುದೇ ಪ್ರಯೋಜನೆವಾಗಿಲ್ಲ. ಒಂದೊಂದಾಗಿ ಪಾಲಿಕೆ ಒಡೆತನದ ಆಸ್ತಿಗಳು ಕೈ ತಪ್ಪುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅಧಿಕಾರಿಗಳನ್ನು ಬದಲಾವಣೆಗೆ ಕ್ರಮವಹಿಸಿ ಅನುಭವಿ ಕಾನೂನು ಅಧಿಕಾರಿಗಳ ನೇಮಕ ಮಾಡಿ ಪಾಲಿಕೆ ಕಾನೂನು ವಿಭಾಗವನ್ನು ಬಲಪಡಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.