ಮಾರುಕಟ್ಟೆ ಭಾಗ ಸಂಪೂರ್ಣ ಲಾಕ್ ಡೌನ್; ನಿಯಮ ಮೀರಿ ವ್ಯಾಪಾರ ಮಾಡಿದವರಿಗೆ ದಂಡ

ದಾವಣಗೆರೆ. ಮೇ.೧೯; ಗ್ರಾಮೀಣಭಾಗದಲ್ಲಿ ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರುಗಳು ಮಾರುಕಟ್ಟೆ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.ನಗರದ ಗಡಿಯಾರ ಕಂಬ, ಚಾಮರಾಜಪೇಟೆ,ಹಾಸಬವಾವಿ ವೃತ್ತ,ಜಗಳೂರು ರಸ್ತೆ ಸೇರಿದಂತೆ ವಿವಿಧೆಡೆ ಮಾರುಕಟ್ಟೆ ಬಳಿ ಬ್ಯಾರಿಕೇಡ್ ಅಳವಡಿಸುತ್ತಿದ್ದಾರೆ.ಮನೆಗಳಿಗೆ ತೆರಳಿ ವ್ಯಾಪಾರ ಮಾಡುವಂತೆ ಪಾಲಿಕೆ ಅಧಿಕಾರಿಗಳು ಸೂಚಿಸುತ್ತಿದ್ದಾರೆ. ಕಳೆದ ಎರಡು ದಿನದ ಹಿಂದೆ  ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ   ಕಂದಾಯ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯ ಜೊತೆ ತರಕಾರಿ ಖರೀದಿ ಮಾರಾಟ ಮಾಡುವ  ಎಲ್ಲಾ ರಸ್ತೆಗಳಲ್ಲಿ ಸಂಚರಿಸಿ ಅರಿವು ಮೂಡಿಸಿದ್ದರು. ಮಾರುಕಟ್ಟೆಯಲ್ಲಿ ಜನರ ನಿಯಂತ್ರಣ ಮಾಡಲು ಇದೀಗ  ಬ್ಯಾರೀಕೇಡ್ ಅಳವಡಿಸಿದ್ದಾರೆ, ಹಳ್ಳಿಗಳಿಂದ ತರಕಾರಿ ಬೆಳೆದವರು ತರಕಾರಿ ಮಾರಲು ಬರುತ್ತಿದ್ದು ಇದರ ಜೊತೆ ಅನೇಕ ಹಳ್ಳಿಯವರು ಸಹ ನಗರಕ್ಕೆ ಆಗಮಿಸುತ್ತಿದ್ದಾರೆ. ಇದರಿಂದ ನಗರದಲ್ಲಿ ಸೊಂಕು ಹೆಚ್ಚಾಗುವುದನ್ನು  ತಡೆಗಟ್ಟಲು ಬೀದಿ ಬದಿಯ ವ್ಯಾಪಾರಿಗಳನ್ನು ಹೊರಗಡೆ ಕಳಿಸಿ ಮನೆ ಮನೆ ತೆರಳಿ ವ್ಯಾಪಾರ ಮಾಡುವಂತೆ ಸೂಚಿಸಿದರು, ಮೊದಲನೇ ದಿನ ಪಾಲಿಕೆ ಮೈಕ್ ಮೂಲಕ ಸೂಚಿಸಿದರು ಸಹ ಇಂದು ಅನೇಕ ಬೀದಿ ಬದಿಯ ವ್ಯಾಪಾರಿಗಳು  ಜನದಟ್ಟನೆ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದರು,ಈ ವೇಳೆ  ಸುಮಾರು 100 ಕ್ಕೂ ಹೆಚ್ಚು ಗಾಡಿಗಳನ್ನು ಮಾರುಕಟ್ಟೆ ಪ್ರದೇಶದಿಂದ ಹೊರ ಹಾಕಲಾಯಿತು. ಕೆಲವರಿಗೆ ದಂಡ ವಿಧಿಸಿದರು,,ಪ್ರತಿ ದಿನ ಮಾರುಕಟ್ಟೆ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಆಗಿ ವಾಣಿಜ್ಯ ವಾಹನಗಳ ಸಂಚಾರಕ್ಕೆ ತೊಂದರೆ ಎಂದು ಕರೆಬಂದ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಾಗಿದೆ. ಈ ವೇಳೆ ವಿಜಯಲಕ್ಷ್ಮಿ ರಸ್ತೆಯಲ್ಲಿ ಬೀದಿಬದಿಯಿದ್ದ  ವೃದ್ದೆಗೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಪ್ರತಿ ದಿನ ಊಟದ ವ್ಯವಸ್ಥೆ ಮಾಡುವಂತೆ ಪಾಲಿಕೆ ಆರೋಗ್ಯ ನೀರಿಕ್ಷಕರಾದ ಮಧುಶ್ರೀ ಯವರಿಗೆ   ಸೂಚಿಸಿದರು. ಗುಂಪಾಗಿ ಜನ ನಿಲ್ಲಿಸಿ  ವ್ಯಾಪ್ಯಾರ ಮಾಡುತ್ತಿದ್ದ ಚಾಮರಾಜಪೇಟೆ ಯ ಅಂಗಡಿಗೆ ಹತ್ತು ಸಾವಿರ ದಂಡ ವಿಧಿಸಿದರು,ಅಂಗಡಿಯವರ ಬಳಿ ಪಾಲಿಕೆ ಟ್ರೇಡ್ ಲೈಸನ್ಸ್ ಸಹ ಪರಿಶೀಲನೆ ಮಾಡಿದರು. ದೊಡ್ಡವರನ್ನು ಬಿಟ್ಟು ನಮ್ಮ ಅಂಗಡಿಗೆ ಯಾಕೆ ದಂಡ ಎಂದು ಅಂಗಡಿ ಮಾಲೀಕನ ಪರ ವಹಿಸಿ ಬಂದ ವ್ಯಕ್ತಿಯೊಬ್ಬನಿಗೆ ಕೇಸ್ ದಾಖಲು ಮಾಡುವ ಎಚ್ಚರಿಕೆ ನೀಡಿ ಖುದ್ದಾಗಿ ತಾವೇ ನಿಂತಿ ಬೀಗ ಹಾಕಿಸಿದರು, ಪಾಲಿಕೆ ಆಯುಕ್ತರ ಜೊತೆ ,ಆರೋಗ್ಯ ನಿರೀಕ್ಷಕ ಪ್ರಕಾಶ್,ಶಶಿಧರ್,ಅಲ್ತಾಮಶ್,ಮದುಶ್ರೀ, ಸಾಮಾಜಿಕ ಕಾರ್ಯಕರ್ತ ಎಂ ಜಿ ಶ್ರೀಕಾಂತ್,ನಾಮಿನಿ ಪಾಲಿಕೆ ಸದಸ್ಯ ಶಿವನಗೌಡ ,ಲೋಹಿತ್,ಪಾಲಿಕೆ ಆರೋಗ್ಯ ಸಿಬ್ಬಂದಿಗಳು ಇದ್ದರು.