ಮಾರುಕಟ್ಟೆ ಜಕಾತಿ ಶುಲ್ಕಕ್ಕೆ ತಡೆಯಾಜ್ಞೆ ನೀಡಿ

ಸಂಡೂರು :ಡಿ:20 ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಡೂರು ಘಟಕದ ವತಿಯಿಂದ ಪುರಸಭೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಪುರಸಭೆಯ ಅಧ್ಯಕ್ಷೆ ಅನಿತಾ ವಸಂತ್ ಕುಮಾರ್ ಅವರಿಗೆ ಮಾರುಕಟ್ಟೆಯಲ್ಲಿ ಜಕಾತಿ ವಸೂಲು ಮಾಡದಂತೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಸಂಡೂರು ಘಟಕದ ಅಧ್ಯಕ್ಷ ಉಜ್ಜಿನಯ್ಯ ಸ್ವಾಮಿ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ, ಕೊರೋನಾದ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತನ ಬಾಳು ಹೀನಾಯ ಸ್ಥಿತಿಗೆ ಬಂದು ನಿಂತಿದೆ, ಪುರಸಭೆಯ ಸದಸ್ಯರ ಸಭೆ ಕರೆದು ಮಾರುಕಟ್ಟೆಯಲ್ಲಿ ಜಕಾತಿ ಶುಲ್ಕವನ್ನು ಮಾರ್ಚ್ ವರೆಗೆ ಕಟ್ಟದಂತೆ ವಿನಾಯಿತಿ ನೀಡಿದ್ದೀರಿ.ಆದರೆ ಕೆಲವು ಜಕಾತಿ ವಸೂಲು ಗುತ್ತಿಗೆ ದಾರರು ತಮ್ಮ ಆದೇಶವನ್ನು ಗಾಳಿಗೆ ತೂರಿ ಜಕಾತಿ ವಸೂಲಿಯಲ್ಲಿ ತೊಡಗಿದ್ದಾರೆ.ಎಂದು ಗಂಭೀರ ಆರೋಪ ಮಾಡಿದರು. ಬಡ, ಬೀದಿ ವ್ಯಾಪಾರಿಗಳು ಸಣ್ಣ ರೈತರು, ತರಕಾರಿ ಬೆಳೆಗಾರರಿಗೆ ಜಕಾತಿ ಯಿಂದ ವಿನಾಯಿತಿ ನೀಡಿರುವ ಬಗ್ಗೆ ಮಾಹಿತಿ ಇಲ್ಲದಂತಾಗಿದೆ.ಆದ್ದರಿಂದ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಮಾರುಕಟ್ಟೆಯ ಜಕಾತಿ ಶುಲ್ಕವನ್ನು ಕಟ್ಟದಂತೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದರು
ರೈತ ಮುಖಂಡರಾದ ಎನ್ ಬಸವರಾಜು. ಚೌಡಪ್ಪ.ಎನ್. ಶಿವಣ್ಣ ಬಿ.ಪಂಪಣ್ಣ.ಮಂಜುನಾಥ. ಎರ್ರಿಸ್ವಾಮಿ. ಪರಶುರಾಮ್ ತಳವಾರ್. ಮತ್ತಿತರ ಅನೇಕ ರೈತ ಮುಖಂಡರು ಉಪಸ್ಥಿತಿ ಇದ್ದರು.

ಪುರಸಭೆಯ ಸರ್ವ ಸದಸ್ಯರು ಅಧ್ಯಕ್ಷರ ಸಭೆಯಲ್ಲಿ ಕೊರೋನಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಂಬರುವ ಮಾರ್ಚ್ ತಿಂಗಳವರೆಗೆ ಮಾರುಕಟ್ಟೆಯ ಜಕಾತಿ ಶುಲ್ಕ ದಿಂದ ವಿನಾಯಿತಿ ನೀಡಿದ್ದು.ಯಾವುದೇ ಕಾರಣಕ್ಕೂ ಜಕಾತಿ ಗುತ್ತಿಗೆದಾರರು ಮಾರುಕಟ್ಟೆಯ ಜಕಾತಿ ಶುಲ್ಕವನ್ನು ವಸೂಲು ಮಾಡದಂತೆ ಕ್ರಮವಹಿಸಲಾಗುವುದು ಮತ್ತು ಬೀದಿ ವ್ಯಾಪಾರಸ್ಥರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು.