ಮಾರುಕಟ್ಟೆಯಲ್ಲಿ ನಾಗರಾಜ್ ಲೋಕಿಕೆರೆ ಮತ ಸಂಚಾರ 

ದಾವಣಗೆರೆ.ಏ.೩೦: ಇಲ್ಲಿನ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ್ ಲೋಕಿಕೆರೆ ಅವರು ಇಂದು ಸಹ ಮುಂಜಾನೆ ಹಣ್ಣು ಮತ್ತು ತರಕಾರಿ ವ್ಯಾಪಾರಸ್ಥರು, ಖರೀದಿದಾರರ ಬಳಿ ಮತಯಾಚಿಸಿದರು.ಪ್ರತಿ ದಿನವೂ ಮುಂಜಾನೆಯೇ ವಾಯುವಿಹಾರಿಗಳ ಭೇಟಿ ಮಾಡಿ ಅವರೊಂದಿಗೆ ಬೆರೆತು ಮತಯಾಚಿಸುತ್ತಾ ಗಮನ ಸೆಳೆಯುತ್ತಿದ್ದ ನಾಗರಾಜ್ ಲೋಕಿಕೆರೆ ಅವರು ಇಂದೂ ಸಹ ವಾಯುವಿಹಾರಿಗಳ ಬಳಿ ಮತಯಾಚಿಸಿ, ನಂತರ ಮಾರುಕಟ್ಟೆಯಲ್ಲಿ ಸಂಚಾರ ನಡೆಸಿ, ಅಲ್ಲಿನ ತರಕಾರಿ, ಹಣ್ಣು ಮತ್ತು ಹೂ ವ್ಯಾಪಾರಿಗಳು, ಖರೀದಿದಾರರ ಬಳಿ ತೆರಳಿ ಮತಯಾಚಿಸಿದರು.ನಾಗರಾಜ್ ಲೋಕಿಕೆರೆ ಅವರಿಗೆ ಅವರ ಪುತ್ರ ಅಭಿ, ಸೋದರ ಸಂಬಂಧಿ ಸಹೋದರ ಡಾ. ಮಧು ಲೋಕಿಕೆರೆ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಚ್ಚಿನ್, ಉಪಾಧ್ಯಕ್ಷರುಗಳಾದ ಕಿರಣ್, ಪಿ.ಸಿ. ಶ್ರೀನಿವಾಸ್, ಶಶಿ ಸೇರಿದಂತೆ ಯುವ ಮೋರ್ಚಾ ಕಾರ್ಯಕರ್ತರ ತಂಡ ಸಾಥ್ ನೀಡಿದ್ದರು.