ಮಾರುಕಟ್ಟೆಯಲ್ಲಿ ಜಾಗೃತಿ ಅಭಿಯಾನ

ದಾವಣಗೆರೆ. ಮೇ.೩೦; ಸ್ಥಳೀಯ ಎಪಿಎಂ‌ಸಿ ಮಾರುಕಟ್ಟೆಯಲ್ಲಿ ಹಮಾಲರಿಗೆ ಸಗಟು ಮಾರಾಟಗಾರರಿಗೆ ಕೊರೊನಾ‌ ವೈರಸ್ ಹರಡದಂತೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವಂತೆ ಪೊಲೀಸರು ಜಾಗೃತಿ ಮೂಡಿಸಿದರು. ಈ ವೇಳೆ  ಕೆಟಿಜೆ ನಗರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿರೇಶ್  ಮಾತನಾಡಿ  ತರಕಾರಿಗಳನ್ನು ಸಗಟು ವ್ಯಾಪಾರ ಮಾತ್ರ ಮಾಡಲು ಮನವಿ ಮಾಡಿದರು.ಕೋವಿಡ್ ಅಲೆ ಹೆಚ್ಚಾಗಿದೆ ಜನರು ಮನೆ ಬಳಿ ಬರುವ ತರಕಾರಿ ಗಾಡಿಗಳಲ್ಲಿ ಖರೀದಿ ಮಾಡುವುದನ್ನು ಬಿಟ್ಟು ತರಕಾರಿ ಖರೀದಿ ಮಾಡಲು ಎಪಿಎಂಸಿ ಗೆ ಬರುತ್ತಿದ್ದಾರೆ.ಇದರಿಂದ ನಿಮ್ಮ ಆರೋಗ್ಯ ತೊಂದರೆ ಎಂದು ವ್ಯಾಪಾರಸ್ಥರಿಗೆ ಹೇಳಿದರು.ನಿಯಮಿತ ಹಮಾಲರನ್ನು ಬಳಸಿಕೊಂಡು ವ್ಯಾಪಾರ ಮಾಡಿ ಎಂದು ಸೂಚಿಸಿದರು.