ಮಾರಿಷಸ್ ನಲ್ಲಿ ಏಕತಾ ಶರಣಮೇಳ

ಚಿತ್ರದುರ್ಗ, ಜು. ೨೮; ಮಾನವನೊಳಗೆ ಏನೆಲ್ಲ ತಲ್ಲಣ. ಕಾರಣ ಮಾನವ ಬದುಕು ಅತ್ಯಂತ ಸಂಕೀರ್ಣ ಆಗುತ್ತಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಮಾರಿಷಸ್ ದೇಶದ ಪೋಸ್ತ್ ಲಫಯೆತ್ತೆ ನಗರದಲ್ಲಿ ನಡೆದ ಅಂತಾರಾಷ್ಟಿçÃಯ ಏಕತಾ ಶರಣಮೇಳದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಬ್ರಹ್ಮಾಂಡವು ವಿಶಾಲವಾಗಿದೆ. ಗಿರಿ-ಪರ್ವತಗಳು, ಸಪ್ತ ಸಾಗರಗಳು, ಅಖಂಡ ಭೂಪ್ರದೇಶ ಮಾತ್ರವಲ್ಲದೆ ಲಕ್ಷಾನುಗಟ್ಟಲೆ ಜೀವಸಂಕುಲವನ್ನು ಹೊಂದಿದೆ. ಅದರೊಟ್ಟಿಗೆ ನವಗ್ರಹಗಳು ಮತ್ತು ಅಸಂಖ್ಯ ನಕ್ಷತ್ರಗಳ ಇರುವಿಕೆಗು ಕಾರಣವಾಗಿದೆ. ಬ್ರಹ್ಮಾಂಡದ ಶಕ್ತಿ ಅಗಾಧವಾಗಿದೆ: ಅಷ್ಟೇ ಅದ್ಭುತವಾಗಿದೆ. ಅಗಾಧ ಶಕ್ತಿಯನ್ನು ಭೇದಿಸಲು ಮಾನವನಿಗೆ ಸಾಧ್ಯವಾಗಿಲ್ಲ. ಬ್ರಹ್ಮಾಂಡದ ಅದ್ಭುತಶಕ್ತಿ ಎಂದರೆ, ಪಂಚಭೂತಗಳು- ಪೃಥ್ವಿ, ಅಪ್ಪು, ತೇಜ, ವಾಯು ಮತ್ತು ಆಕಾಶ. ಪಂಚಭೂತಗಳು ತಮ್ಮದೇ ಆದ ವಿಶಿಷ್ಟ ಶಕ್ತಿಯನ್ನು ಪಡೆದಿರುತ್ತವೆ. ಬ್ರಹ್ಮಾಂಡದ ಶಕ್ತಿಯು ಪಿಂಡಾAಡದಲ್ಲಿದೆ. ಬ್ರಹ್ಮಾಂಡವನ್ನು ಬಿಟ್ಟು ಪಿಂಡಾAಡವಿಲ್ಲ. ಪಿಂಡಾAಡದ ಸೃಷ್ಟಿಯ ಮೂಲ ಬ್ರಹ್ಮಾಂಡ. ಬ್ರಹ್ಮಾಂಡದಲ್ಲಿ ಆಗಾಗ ಪ್ರಕೃತಿ ಪ್ರಕೋಪ ಸಂಭವಿಸುತ್ತದೆ. ಚಂಡಮಾರುತ, ಭೂಕಂಪ, ಮಹಾಪ್ರವಾಹ, ಕಾಡ್ಗಿಚ್ಚು ಹಾಗು ಜ್ವಾಲಾಮುಖಿ ಅಲ್ಲಲ್ಲಿ ಮತ್ತು ಆಗಾಗ ಉಂಟಾಗುತ್ತವೆ. ಮಾನವ ಅತಿಯಾಗಿ ಅನಿಲಗಳ ಉತ್ಪತ್ತಿ ಮಾಡುತ್ತಿರುವುದರಿಂದ ಓಜೋನ್ ಪದರು ದುರ್ಬಲ ಆಗುತ್ತಿದೆ. ಅದರಿಂದಾಗಿ ತಾಪಮಾನ ಅಧಿಕವಾಗುತ್ತ ಸಾಗಿದೆಯೆಂಬುದು ವಿಜ್ಞಾನಿಗಳ ಅನಿಸಿಕೆ ಆಗಿದೆ ಎಂದರು.