ಮಾರಿಯಮ್ಮನ ಪೂಜೆಗೆ ಜನತೆ ವಿಶೇಷ ಆಸಕ್ತಿ

ಬಂಗಾರಪೇಟೆ.ಫೆ೨೧:ಭಕ್ತರ ಕಷ್ಟ ಕಾರ್ಪಣ್ಯಗಳ ಈಡೇರಿಸುವ ಮಾರಿಯಮ್ಮ ಮತ್ತು ನಾಗದೇವತೆ ದೇವರುಗಳ ಪ್ರತಿಷ್ಠಾಪನೆ.
ಮಾರಿಯಮ್ಮ ದೇವಿಯು ಭಕ್ತಾದಿಗಳ ಇಷ್ಟಾರ್ಥ ಸಿದ್ದಿಗೆ ಸಾಕ್ಷಿಯಾಗಿ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಈಡೇರಿಸುವ ಕಾಯಕಲ್ಪವಾಗಿ ನಿಂತಿದೆ. ಮಾರಿಯಮ್ಮ ದೇವಿಯ ಆರಾಧನೆಯಲ್ಲಿ ಭಕ್ತರು ದೇವಿಯ ಮೇಲಿನ ಶ್ರದ್ಧೆ ಮತ್ತು ಭಕ್ತಿ, ನಂಬಿಕೆಯಿಂದ ಪೂಜಿಸುವುದಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಮಾರಿಯಮ್ಮ ದೇವಿಯ ಪ್ರಸಾದವನ್ನು ಪಡೆಯುವುದು ಅವರ ಭಕ್ತರಿಗೆ ನಿರಾಶಾತೀತ ನಿರೀಕ್ಷೆಯ ಸ್ಥಿತಿಯನ್ನು ಕೊಡುತ್ತದೆ, ಈ ಪೂಜೆ ಮತ್ತು ಆರಾಧನೆಯ ಮೂಲಕ ಮಾರಿಯಮ್ಮ ದೇವಿ ತನ್ನ ಭಕ್ತರ ಮೇಲೆ ಅಪಾರ ದಯೆ ಮತ್ತು ಕರುಣೆಯನ್ನು ದಯಪಾಲಿಸುತ್ತಾಳೆ ಎಂಬ ನಂಬಿಕೆ ಪ್ರತೀತಿಯಲ್ಲಿದೆ ಎಂದು ಇಲ್ಲಿನ ಅರ್ಚಕರು ಹೇಳುತ್ತಾರೆ.


ತಾಲೂಕಿನ ಕಾಮಸಮುದ್ರ ವ್ಯಾಪ್ತಿಯ ಬಂದರ?ಲಹಳ್ಳಿ ಗ್ರಾಮದಲ್ಲಿ ಮಾರಿಯಮ್ಮ ಮತ್ತು ನಾಗದೇವತೆ ದೇವರುಗಳ ಪ್ರತಿಷ್ಠಾಪನೆ ಮಾಡಲಾಯಿತು, ತಾಲೂಕಿನ ಗ್ರಾಮದಲ್ಲಿ ೩೦೦ ವರ್ಷಗಳ ಹಿಂದಿನ ಪ್ರಸಿದ್ಧವಾದ ದೇವಾಲಯವು ಗಿಡಘಂಟೆಗಳ ಮಧ್ಯದಲ್ಲಿ ನೆಲೆಸಿತ್ತು. ಅಂತಹ ದೇವಾಲಯವು ದೈವಿಕ ಶಕ್ತಿಯನ್ನು ಹೊಂದಿದ್ದ ಕಾರಣ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು ದೇವರಿಗೆ ಒಪ್ಪಿಸುತ್ತಿದ್ದರು. ತದನಂತರದ ದಿನಗಳಲ್ಲಿ ದೈವ ಸಂಕಲ್ಪದಿಂದ ಭಕ್ತಾಧಿಗಳ ಇಷ್ಟಾರ್ಥಗಳು ಇಡೇರುತ್ತಿದ್ದವು ಆದಕಾರಣ ಇಂದು ಬೃಹದಾಕಾರವಾಗಿ ನೂತನ ದೇವಾಲಯವಾಗಿ ಬೆಳೆದು ನಿಂತಿದೆ. ಇಂದು ವೇದ ಪಾರಾಯಣ, ಮಹಾಗಣಪತಿ ಪೂಜೆ, ಕಳಶ ಸ್ಥಾಪನೆ, ನಾಡಿ ಸಂಧಾನ, ಗಣಪತಿ ಹೋಮ, ಪ್ರಧಾನ ಹೋಮ, ನವಗ್ರಹ ಹೋಮ, ಮೃತ್ಯೂಂಜಯ, ಮಹಾಲಕ್ಷಿ?ಮ ಹೋಮ, ಕಳಾ ಹೋಮ, ನಾಗದೇವತೆ ಹೋಮ, ಹಾಗೂ ವಿಶೇಷವಾಗಿ ಪೂರ್ಣ ಕುಂಬಾಭಿಷೇಕ, ಅಲಂಕಾರ, ಧೂಪ, ದೀಪ ನೈವೈದ್ಯ, ಮಂತ್ರ ಪುಷ್ಪ, ಅಷ್ಠಾವಧಾನ ಸೇವೆ, ಕುಷ್ಠಾಂಡಚೇದನ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ, ಹಾಗೂ ರಾತ್ರಿ ತಿರುಪತಿ ಸ್ವರ್ಣಲತ ಅವರಿಂದ ಹರಿಕಥೆ ಏರ್ಪಡಿಸಲಾಗಿತ್ತು.
ಈ ವೇಳೆ ಜೆಸಿಬಿ ನಾರಾಯಣಪ್ಪ ಮಾತನಾಡಿ, ಮಾರಿಯಮ್ಮ ದೇವಿಯ ಪ್ರಸಿದ್ಧತೆ ಹಾಗೂ ದೇವಿಯ ಭಕ್ತರ ಮೇಲಿನ ಪ್ರೀತಿ ಹಾಗೂ ಅವರ ಕಷ್ಟಗಳನ್ನು ಶಮನಗೊಳಿಸುವ ಶಕ್ತಿ ದೇವತೆಯಾಗಿದ್ದಾಳೆ ಎಂದರು.
ಪುರಸಭೆ ಸದಸ್ಯ ವೈ.ಸುನೀಲ್‌ಕುಮಾರ್ ಮಾತನಾಡಿ, ಹಿಂದೂ ಧರ್ಮದಲ್ಲಿ ದೇವಿ ಪೂಜೆ ಅತ್ಯಂತ ಪ್ರಾಚೀನವಾದ ಆಚರಣೆಗಳಲ್ಲೊಂದಾಗಿದೆ. ಭಕ್ತರು ಮಾರಿಯಮ್ಮ ದೇವಿಯ ಪೂಜೆಯನ್ನು ಇಂದು ನೆರವೇರಿಸಿದ್ದೇವೆ. ಸುತ್ತಮುತ್ತಲ ಗ್ರಾಮದ ಭಕ್ತರು ಸಾಗರೋಪಾದಿಯಲ್ಲಿ ಬಂದು ಅಭಿಷೇಕ, ಪೂಜೆಯಲ್ಲಿ ನಿರತರಾಗಿದ್ದಾರೆ. ನೆರೆದು ಬಂದ ಭಕ್ತಾಧಿಗಳಿಗೆ ಅನ್ನದಾನ ಹಾಗೂ ಪ್ರಸಾದ ವಿನೋಯೋಗ ಮಾಡಲಾಯಿತು. ಮಾರಿಯಮ್ಮ ದೇವಿಯ ಮಾತೃತ್ವ ಸ್ವಭಾವದ ಭಾವನೆ ಪೂಜಾರ್ಚನೆಗಳಲ್ಲಿ ಅತ್ಯಂತ ಪ್ರಮುಖವಾಗಿದೆ ಎಂದು ತಿಳಿಸಿದರು.
ಫೈಯರ್ ಟೀಮ್ ಯುವಕ ಮಂಡಳಿ ಮತ್ತು ತೊಪ್ಪನಹಳ್ಳಿ, ಚಾಮನಹಳ್ಳಿ, ಶಿವಲಿಂಗ, ಕಳವಂಚಿ, ಚಿಕ್ಕಕಳಂಚಿ, ಬೆಂಗಳೂರು, ಕೀರಮಂದೆ, ಮಿಟ್ಟಹಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.