ಮಾರಿಕಾಂಭ ದೇವಾಲಯ: 25 ಲಕ್ಷ ಹುಂಡಿ ಹಣ

ಮಾಲೂರು ಮೇ೧೬:ಪಟ್ಟಣದ ಮಾರಿಕಾಂಬ ದೇವಾಲಯದಲ್ಲಿ ಭಕ್ತರು ಕಾಣಿಕೆ ಹಾಗೂ ಮುಡುಪಿನ ರೂಪದಲ್ಲಿ ಹುಂಡಿಗೆ ಹಾಕಿದ್ದ ಹುಂಡಿ ಹಣವನ್ನು ಎಣಿಕೆ ಮಾಡಿದಾಗ ರೂ ೨೫ ಲಕ್ಷ ನಗದು ೨೮ ಗ್ರಾಂ ಚಿನ್ನ ೨೮೦ ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಕಳೆದ ಮೂರು ತಿಂಗಳು ೧೦ ದಿನಗಳಲ್ಲಿ ಮಾರಿಕಾಂಬಾ ದೇವಾಲಯಕ್ಕೆ ಆಗಮಿಸುವ ಭಕ್ತರು ಹುಂಡಿಗೆ ಮುಡಿಪು ಹಾಗೂ ಕಾಣಿಕೆ ರೂಪದಲ್ಲಿ ಅರ್ಪಿಸಿದ್ದ ಹುಂಡಿ ಹಣವನ್ನು ಟ್ರಸ್ಟಿನ ಅಧ್ಯಕ್ಷ ಪಿ.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಮಾರಿಕಾಂಬ ದೇವಾಲಯದಲ್ಲಿ ಮಂಗಳವಾರ ಕೆನರಾ ಬ್ಯಾಂಕ್ ಸಿಬ್ಬಂದಿ ಹಾಗೂ ಟ್ರಸ್ಟಿನ ಸದಸ್ಯರು ಭಕ್ತಾದಿಗಳು ಎಣಿಕೆ ಮಾಡಲಾಯಿತು.
೨೫ ಲಕ್ಷ ನಗದು ೨೮ ಗ್ರಾಂ ಚಿನ್ನ ೨೮೦ ಗ್ರಾಂ ಬೆಳ್ಳಿ ಸಂಗ್ರಹವಾಗಿದೆ, ಹುಂಡಿ ಎಣಿಕೆ ಕಾರ್ಯದಲ್ಲಿ ಟ್ರಸ್ಟಿನ ಸದಸ್ಯರು ಹಾಗೂ ಭಕ್ತಾದಿಗಳು ಹುಂಡಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಪೊಟೊ ೨: ಮಾಲೂರು ಪಟ್ಟಣದ ಮಾರಿಕಾಂಬ ದೇವಾಲಯದಲ್ಲಿ ಭಕ್ತರು ಕಾಣಿಕೆ ಹಾಗೂ ಮುಡುಪಿನ ರೂಪದಲ್ಲಿ ಹುಂಡಿಗೆ ಹಾಕಿದ್ದ ಹುಂಡಿ ಹಣವನ್ನು ಎಣಿಕೆ ಮಾಡಿದಾಗ ರೂ ೨೫ ಲಕ್ಷ ನಗದು ೨೮ ಗ್ರಾಂ ಚಿನ್ನ ೨೮೦ ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.