
ಕಲಬುರಗಿ.ಜ.11:ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ವಿರೋಧಿಸಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಆರಂಭವಾಗಿರುವ ಧರಣಿ ಸತ್ಯಾಗ್ರಹ ಸೋಮವಾರ 8ನೇ ದಿನದಲ್ಲಿ ಮುಂದುವರೆಯಿತು.
ಕೃಷಿಗೆ ಸಂಬಂಧಿತ ಮೂರು ಕಾನೂನುಗಳು ಹಾಗು ವಿದ್ಯುತ್ ಮಸೂದೆಯನ್ನು ಕೇಂದ್ರ ಸರ್ಕಾರ ರದ್ದು ಮಾಡುವಂತೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಮಸೂದೆಗಳನ್ನು ರಾಜ್ಯ ಸರ್ಕಾರ ರದ್ದುಪಡಿಸುವಂತೆ, ಕೇಂದ್ರ ಸರ್ಕಾರದ ಕೃಷಿಗೆ ಸಂಬಂಧಿತ ನಾಲ್ಕು ಕಾಯ್ದೆಗಳನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕನಿಷ್ಟ ಬೆಂಬಲ ಬೆಲೆಯನ್ನು ಖಾತ್ರಿ ಮಾಡುವ ಕಾಯ್ದೆಯನ್ನು ಕೂಡಲೇ ಜಾರಿಗೆ ತರಬೇಕೆಂದು ಆಗ್ರಹಿಸಿ, ಚಾರಿತ್ರಿಕ ದೆಹಲಿ ರೈತ ಹೋರಾಟವನ್ನು ಬೆಂಬಲಿಸಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ತೊಗರಿ ಕ್ವಿಂಟಲ್ ಗೆ 8750 ರೂ. ಬೆಂಬಲ ಬೆಲೆ ನೀಡಿ ಖರೀದಿಸಬೇಕೆಂದು ಪ್ರತಿಭಟನೆಕಾರರು ಒತ್ತಾಯಿಸಿದರು.ಕೇಂದ್ರ ಸರ್ಕಾರದ ಆದಿನ ಸಂಸ್ಥೆಯಾದ ನಫಡ್ ಅಧಿಕಾರಿಗಳು ಕಳೆದ ವರ್ಷ ತೊಗರಿ ಈ ಸಂದರ್ಭದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತಿರುವದು ರೈತರನ್ನು ಆತಂಕ,ದಿವಾಳಿಗೆ ತಳ್ಳುವಂತಾಗೆ ಕೂಡಲೇ ನಫಡ್ ಅಧಿಕಾರಿಗಳ ಈ ತೀರ್ಮಾನ ಕೈ ಬಿಡುವಂತೆ, ಉದ್ಯೋಗ ಖಾತರಿ ಯೋಜನೆಯನ್ನು ನಗರ ಪ್ರದೇಶಗಳಿಗೆ ವಿಸ್ತರಣೆ ಹಾಗೂ ಉದ್ಯೋಗ ಖಾತರಿ ದಿನದ ಕೂಲಿ 425 ರೂ.ಗಳು ಹೆಚ್ಚಿಸುವಂತೆ, ಮಹಾನಗರ ಪಾಲಿಕೆಯಲ್ಲಿ ಕಸ ಗುಡಿಸುವ ಪೌರ ಕಾರ್ಮಿಕರಿಗೆ ಮನೆ ನಿವೇಶನ ನೀಡುವಂತೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಅಪೌಷ್ಟಿಕತೆಯಿಂದ ಶಿಶು ಮರಣ ಪ್ರಮಾಣ ಹೆಚ್ಚಾಗಿದ್ದು ಇದನ್ನು ತಡೆಗಟ್ಟಲು ಸರ್ಕಾರ ರೇಷನ್ ಅಂಗಡಿಗಳ ಮೂಲಕ ತೊಗರಿ ಬೇಳೆಕಾಳು ವಿತರಣೆ ಮಾಡಬೇಕು ಎಂಬ ಹಲವಾರು ಬೇಡಿಕೆಗಳನ್ನು ಇಡೇರಿಸುವಂತೆ ಅವರು ಒತ್ತಾಯಿಸಿದರು.
ಧರಣಿ ನಿರತರ ಪರವಾಗಿ ರೈತ ಮುಖಂಡ ಸುನಿಲ್ ಮಾನಪಡೆ ಅವರು ಮಾತನಾಡಿ, ರೈತರ ಬೆಂಬಲಕ್ಕೆ ನಿಂತ ಕಲಾವಿದರ ಕಾರ್ಯವನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅಶೋಕ್ ಮ್ಯಾಗೇರಿ, ಕಾಶಿನಾಥ್ ಬಂಡೆ, ನಾಗಯ್ಯಾಸ್ವಾಮಿ, ಮೈಲಾರಿ ದೊಡ್ಮನಿ, ಮಲ್ಲಿನಾಥ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು
ಧರಣಿ ಸತ್ಯಾಗ್ರಹ ಸ್ಥಳಕ್ಕೆ ಖ್ಯಾತ ಚಿತ್ರ ಕಲಾವಿದ ಡಾ. ವಿಜಯ್ ಹಾಗರಗುಂಡಗಿ, ನಾಟಕ ಅಕ್ಯಾಡೆಮಿ ಮಾಜಿ ಸದಸ್ಯ ಡಾ. ಸಂದೀಪ್ ಬಿ, ಕಲ್ಯಾಣಿ ಭಜಂತ್ರಿ, ಬಾಬುರಾವ್ ಮೇಲಿನಕೇರಿ, ನಾಗೇಶ್ ಹರಳಯ್ಯ, ಮಹಾಂತೇಶ್, ವಿಠ್ಠಲ್ ಚಿಕ್ಕಣಿ, ರುಕ್ಮಿಣಿ ನಾಗಣ್ಣನವರ್, ಮಸ್ತಾನ್ ಬಿರಾದಾರ್, ಸಾಯಿಬಣ್ಣ ದೊಡ್ಡಮನಿ, ಅವಿನಾಶ್ ನಿಟ್ಟುರೆ ಮುಂತಾದವರು ಭೇಟಿ ನೀಡಿ ಹೋರಾಟಕ್ಕೆ ಬೆಂಬಲಿಸಿದರು.