ಮಾರಕಾಸ್ತ್ರ ಹಿಡಿದ ಮಾಲಾಶ್ರೀ

ಆಕ್ಷನ್ ಕ್ವೀನ್ ಮಾಲಾಶ್ರೀ “ಮಾರಕಾಸ್ತ್ರ” ಹಿಡಿದಿದ್ದಾರೆ. ಅವರ ಹೊಸ ಚಿತ್ರದ ಹೆಸರು ಮಾರಕಾಸ್ತ್ರ.ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ವಿಕಲಚೇತನ ಗುರುಮೂರ್ತಿ ಚಿತ್ರಕ್ಕೆ ಆಕ್ಷನ್‍ಕಟ್ ಹೇಳಿದ್ದು ಅವರಿಗೆ ಸಹಾಯಕರಾಗಿ ನೃತ್ಯನಿರ್ದೇಶಕ ಧನಕುಮಾರ್ ಕೆಲಸ ಮಾಡಿದ್ದಾರೆ.

ಈ ವೇಳೆ ಮಾತಿಗಿಳಿದ ನಟಿ ಮಾಲಾಶ್ರೀ,ಮೊದಲು ಹನ್ನೊಂದು ದಿನಗಳ ಕಾಲ ನನ್ನ ಚಿತ್ರೀಕರಣ ಎಂದು ನಿಗದಿಯಾಗಿತ್ತು. ಆನಂತರ ಒಟ್ಟು ಅರವತ್ತು ದಿನಗಳ ಕಾಲ  ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ನಾಲ್ಕು ಸಾಹಸ ಸನ್ನಿವೇಶಗಳಿದೆ ಆಕ್ಷನ್ ಕ್ವೀನ್ ಎಂದು ಕರೆಸಿಕೊಳ್ಳಲು ಥ್ರಿಲ್ಲರ್ ಮಂಜು ಮಾಸ್ಟರ್ ಪ್ರಮುಖ ಕಾರಣ. ಅವರ ಜೊತೆಗೆ  ಚಿತ್ರದಲ್ಲೂ ಕೆಲಸ ಮಾಡಿದ್ದು ಖುಷಿಯಾಗಿದೆ ಎಂದರು.

“ಮಾರಕಾಸ್ತ್ರ” ಚಿತ್ರದ ಸಾಹಸ ಸನ್ನಿವೇಶಗಳು ನನ್ನ ಹಿಂದಿನ “ಚಾಮುಂಡಿ”, ” ಶಕ್ತಿ” ಮುಂತಾದ ಚಿತ್ರಗಳ ಸಾಹಸ ಸನ್ನಿವೇಶಗಳನ್ನು ನೆನಪಿಸಿತು.ಜೊತೆಗೆ ಪತಿ ರಾಮು ಮಾಡುತ್ತಿದ್ದ ಸಾಹಸ ದೃಶ್ಯಗಳು ಕಣ್ಣ ಮುಂದೆ ಬಂದು ಕಣ್ಣು ತುಂಬಿಕೊಂಡಿತ್ತು ಎಂದು ಹೇಳಿದರು.

ನಿರ್ದೇಶಕ ಗುರುಮೂರ್ತಿ, “ಮಾರಕಾಸ್ತ್ರ”ಕೌಟುಂಬಿಕ ಚಿತ್ರ ಜೊತೆಗೆ ಆಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲವೂ ಇದೆ . ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದರು.

ನಿರ್ಮಾಪಕ ನಟರಾಜ್ ಚಿತ್ರದಲ್ಲಿ ನಟನೆ ಕೂಡ ಮಾಡಿದ್ದೇನೆ.್ನ ದೇಶದ ಮೇಲೆ ಅಭಿಮಾನ ಹೆಚ್ಚು. ಹಾಗಾಗಿ ಈ ಚಿತ್ರದ ಹಾಡೊಂದರ ಚಿತ್ರೀಕರಣವನ್ನು ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಸುಮಾರು ಮೂವತ್ತೆರಡು ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಸದ್ಯದಲ್ಲೇ ಹಾಡನ್ನು ಬಿಡುಗಡೆ ಮಾಡುತ್ತೇವೆ ಎಂದರು.

ನಟಿ ಹರ್ಷಿಕಾ ಪೂಣಚ್ಚ,  ಚಿತ್ರದಲ್ಲಿ ಕ್ರೈಮ್ ರಿಪೆÇೀರ್ಟರ್ ಆಗಿ ಕಾಣಿಸಿಕೊಂಡಿದ್ದೇನೆ  ಎಂದರೆ ನಾಯಕ ಆನಂದ್ ಆರ್ಯ, ಭರತ್ ಸಿಂಗ್,  ಉಗ್ರಂ ಮಂಜು ಪಾತ್ರದ ಬಗ್ಗೆ ಹೇಳಿಕೊಂಡರು. ನಿರ್ಮಾಪಕಿ ಕೋಮಲ ನಟರಾಜ್, ನಿರ್ಮಾಪಕ ಮಂಜುನಾಥ್ ಹಾಗೂ ಹಿನ್ನೆಲೆ ಸಂಗೀತ ನೀಡಿರುವ ಸತೀಶ್ ಬಾಬು ಮಾಹಿತಿ ನೀಡಿದರು