ಮಾರಕಾಸ್ತ್ರದಿಂದ ಇರಿದು ಆಟೋಚಾಲಕನ ಕೊಲೆ

ಕಲಬುರಗಿ ಮೇ 15: ನಗರದ ಆಟೋ ಚಾಲಕನೊಬ್ಬನನ್ನು ಆತನ ಪತ್ನಿಯ ಸಹೋದರನೇ ಕೊಲೆ ಮಾಡಿದ ಘಟನೆ ನಗರದಲ್ಲಿಂದು ನಡೆದಿದೆ
ನಗರದ ಗಾಲೀಬ್ ಕಾಲೋನಿ ನಿವಾಸಿ ಮೊಹಮ್ಮದ್ ಬಾಬಾ ಉರ್ಫ ಬಂಡಿಬಾಬಾ ಎಂಬಾತನೇ ಹತ್ಯೆಯಾದ ಆಟೋ ಚಾಲಕ.
ಮೊಹಮ್ಮದ್ ಬಾಬಾ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದ.ಇದರಿಂದ ನೊಂದ ಬಾಬಾ ಪತ್ನಿ ತನ್ನ ಸಹೋದರ ಚಾಂದ್ ನನ್ನು ಸಹಾಯಕ್ಕೆ ಕರೆದಿದ್ದಾಳೆ.ಸ್ಥಳಕ್ಕೆ ಬಂದ ಚಾಂದ್ ಜಗಳ ಬಿಡಿಸುವ ವೇಳೆ ಮಾರಕಾಸ್ತ್ರಗಳಿಂದ ಇರಿದಿದ್ದಾನೆ.ತೀವ್ರ ಗಾಯಗೊಂಡ .ಮೊಹಮ್ಮದ್ ಬಾಬಾ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಹತ್ಯೆ ಮಾಡಿದ ಚಾಂದ್ ನಂತರ ಆರ್ ಜಿ ನಗರ ಪೊಲೀಸರಿಗೆ ಶರಣಾಗಿದ್ದಾನೆ.
2019 ರ ಆಗಸ್ಟ್ 7 ರಂದು ನಡೆದ ಚಾಂದ್ ಸೋದರ ಮಹಮದ್ ರಫೀಕ್ ಕೊಲೆ ಪ್ರಕರಣದಲ್ಲಿ ಮೊಹಮ್ಮದ್ ಬಾಬಾ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಮೊಹಮ್ಮದ್ ಬಾಬಾ ಇತ್ತೀಚಿಗಷ್ಟೇ ಜೇಲಿನಿಂದ ಬಿಡುಗಡೆಯಾಗಿ ಹೊರ ಬಂದಿದ್ದ.