ಮಾರಕಾಸ್ತ್ರಗಳಿಂದ ಹೊಡೆದು ಯುವಕನ ಕೊಲೆ

ಕಲಬುರಗಿ,ಮಾ.24-ಮಾರಕಾಸ್ತ್ರಗಳಿಂದ ಹೊಡೆದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಅಪರಿಚಿತ ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ನಾಗನಹಳ್ಳಿ ಸೀಮೆಯ ಹೊಲ ಒಂದರಲ್ಲಿ ನಡೆದಿದೆ.
ಕೊಲೆಯಾದ ಯುವಕ 25 ರಿಂದ 30 ವರ್ಷ ವಯಸ್ಸಿನವನಾಗಿದ್ದು, ಬಿಳಿ ಬಣ್ಣದ ಲೈನಿಂಗ್ ಇರುವ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಶವ ಪೂರ್ತಿ ಕೊಳೆತು ಹೋಗಿದ್ದು, ಗುರುತು ಸಿಗದಂತಾಗಿದೆ. ಕೊಲೆಯಾದ ಯುವಕ ಯಾರು, ಕೊಲೆಗೆ ಕಾರಣವೇನು ?, ಕೊಲೆ ಮಾಡಿದವರು ಯಾರು ? ಇತ್ಯಾದಿ ವಿವರಗಳಿನ್ನೂ ತಿಳಿದುಬಂದಿಲ್ಲ.
ಅಂಬರೀಶ ಶಖಾಪೂರ ಎಂಬುವವರು ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.