ಮಾರಕಾಸ್ತ್ರಗಳಿಂದ ಇರಿದು ಬೈಕ್‍ಸವಾರನ ಕೊಲೆ

ಕಲಬುರಗಿ,ಮೇ 22: ನಗರದ ಹುಮಾನಾಬಾದ್ ರಿಂಗ್ ರಸ್ತೆ ಆದರ್ಶ ಕಾಲೋನಿ ಮಣೂರ ಆಸ್ಪತ್ರೆ ಬಳಿ ಬೈಕ್ ಮೇಲೆ ಬರುತ್ತಿದ್ದ ಯುವಕನನ್ನು ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ ಘಟನೆ ಮಧ್ಯರಾತ್ರಿ ಜರುಗಿದೆ.
ಪ್ರಮೋದ ಇಂದ್ರಜಿತ್ ಗೋಳಿ (24) ಕೊಲೆಯಾದ ಯುವಕ.ರವಿವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಸಂತ್ರಾಸವಾಡಿಯಿಂದ ಪೂಜಾ ಕಾಲೋನಿಯ ಕಡೆಗೆ ಬೈಕ್ ಮೇಲೆ ರಸ್ತೆಯಲ್ಲಿ ಬರುತ್ತಿದ್ದಾಗ,ಕಾರಿನಲ್ಲಿ ಬರುತ್ತಿದ್ದವರೊಂದಿಗೆ ವಾಹನಕ್ಕೆ ದಾರಿ ಕೊಡುವ ವಿಚಾರದಲ್ಲಿ ವಾಗ್ವಾದ ನಡೆದಿದೆ ಎನ್ನಲಾಗಿದೆ.
ಆಗ ಕಾರಿನಿಂದ ಇಳಿದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬೈಕ್ ಸವಾರ ಪ್ರಮೋದನನ್ನು ಕೊಲೆ ಮಾಡಿದ್ದಾರೆ.
ಕೊಲೆಯಾದ ಯುವಕ ಪ್ರಮೋದ ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದವ. ಆತ ನಗರದ ಸೇಡಂ ರಸ್ತೆ ಪೂಜಾ ಕಾಲೋನಿಯ ತನ್ನ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಚೇತನ ಆರ್ ಹಾಗೂ ಉಪ ಆಯುಕ್ತ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಲೆಗೆ ನಿಖರ ಕಾರಣಗಳ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಎಂ.ಬಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.