ಮಾರಕಡೆಂಗೀ ನಿಯಂತ್ರಣಕ್ಕೆ ಸರ್ವರೂ ಕೈಜೋಡಿಸಲು ಕರೆ


ಸಂಜೆವಾಣಿ ವಾರ್ತೆ
ಸಂಡೂರು: ಮೇ: 16: ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾದ “ರಾಷ್ಟ್ರೀಯ ಡೆಂಗೀ ದಿನ -2023″ ರ ಆಚರಣೆ ಅಂಗವಾಗಿ ಆಶಾ ಕಾರ್ಯಕರ್ತೆಯರಿಗೆ ಡೆಂಗೀ ನಿಯಂತ್ರಣ ಕುರಿತು ತರಬೇತಿ ನೀಡಲಾಯಿತು, ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ನಿತ್ಯದ ಮನೆಬೇಟಿ ಸಮಯದಲ್ಲಿ ಜನರಿಗೆ ಜಾಗೃತಿ ಮೂಡಿಸಲು ಸೂಚಿಸಿದರು, ಡೆಂಗೀ ತಡೆಗಟ್ಟಬಹುದ ಕಾಯಿಲೆ, ಭಯ ಬೀಳುವ ಅವಶ್ಯಕತೆ ಇಲ್ಲ, ಡೆಂಗೀ ತಡೆಗಟ್ಟಲು ಎಲ್ಲರೂ ಕೈಜೋಡಿಸಬೇಕು ಎನ್ನುವ ಮಾಹಿತಿಯನ್ನು” ಸಾರ್ವಜನಿಕರಿಗೆ ಮುಟ್ಟಿಸಿ ಎಂದು ಮನವಿ ಮಾಡಿದರು,
 ಡೆಂಗೀ ಕಾಯಿಲೆಯ ಲಕ್ಷಣಗಳು ದಿಢೀರ್ ಕಾಣಿಸಿಕೊಳ್ಳುವವು ಮೊದಲನೇಯದಾಗಿ ತಲೆ ನೋವು, ವಿಪರೀತ ಜ್ವರ, ಕಣ್ಣಿನ ಹಿಂಭಾಗ ನೋವು, ವಾಕರಿಕೆ, ವಾಂತಿ, ಕೀಲು ಮತ್ತು ಮೀನಗಂಡಗಳ ನೋವು, ಚರ್ಮದ ಮೇಲೆ ರಕ್ತದ ಗಂಧೆಗಳು ಕಾಣಿಸಿಕೊಂಡು ನಂತರ ಹೆಮರೈಜ್ ಆಗಿ ಕಪ್ಪು ಬಣ್ಣದ ರಕ್ತ ಭೇದಿ, ಮೂಗು, ಕಿವಿ, ಕಣ್ಣಿನಿಂದ ರಕ್ತ ಹರಿಯುವುದು, ನಂತರ ಅಪಸ್ಮಾರ ಸ್ಥಿತಿ ತಲುಪಿಸುವ ಭಯನಾಕ ಕಾಯಿಲೆ ಇದಾಗಿದ್ದು, ಮೊದಲ ಹಂತದಲ್ಲೆ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದರೆ ಪ್ರಾಣಾಪಾಯವಾಗುದಿಲ್ಲ, ರೋಗ ಬರುವ ಮೊದಲೇ ಎಚ್ಚರಿಕೆ ವಹಿಸಿದರೆ ಅಪಾಯದಿಂದ ಪಾರಾಗಬಹುದು,
 ಡೆಂಗೀ ನಿಯಂತ್ರಣ ಕ್ರಮದಡಿ ಹಗಲಲ್ಲಿ ಕಚ್ಚುವ ಈಡಿಸ್ ಜಾತಿಯ ಸೊಳ್ಳೆಗಳ ನಿಯಂತ್ರಣವೇ ಮುಖ್ಯವಾಗಿದೆ, ಮನೆಯಲ್ಲಿನ ನೀರಿನ ತೊಟ್ಟಿ,ಬ್ಯಾರೆಲ್, ಚಿಪ್ಪು,ಬಾಟಲ್ ಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ, ಸೊಳ್ಳೆಗಳು ಮನುಷ್ಯರಿಗೆ ಕಚ್ಚುವುದರಿಂದ ರೋಗಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತವೆ, ಸೊಳ್ಳೆಗಳ ನಿಯಂತ್ರಿಸಲು ಲಾರ್ವಾ ಸಮೀಕ್ಷೆ ಮಾಡಬೇಕು, ವಾರದಲ್ಲಿ ಎರಡು ಬಾರಿ ನೀರು ಶೇಕರಿಸುವ ಡ್ರಮ್,ಬ್ಯಾರಲ್,ಗಡಿಗೆ, ಸಿಮೆಂಟ್ ತೊಟ್ಟಿಗಳನ್ನು ಸ್ವಚ್ಚವಾಗಿ ತೊಳೆದು ಒಣಗಿದ ನಂತರ ನೀರು ಶೇಕರಿಸಿ ಮುಚ್ಚಳ ಅಥವಾ ಬಟ್ಟೆಗಳಿಂದ ಕಟ್ಟಿ ಸೊಳ್ಳೆ ಮೊಟ್ಟೆಗಳು ಇಡದಂತೆ ಎಚ್ಚರಿಕೆ ವಹಿಸಬೇಕು,ತೆಂಗಿನ ಚಿಪ್ಪು,ಬಾಟಲ್, ಟೈರ್, ಟೂಬ್ ಮುಂತಾದ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಬೇಕು, ಮನೆಯ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿ ಇಟ್ಟುಕೊಳ್ಳ ಬೇಕು, ಚರಂಡಿಯಲ್ಲಿ ಕಸಕಡ್ಡಿ ಹಾಕಬಾರದು, ವ್ಯರ್ಥ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳುವುದು ಜಾಗೃತಿಯನ್ನು ಮೂಡಿಸಿ, ಹಗಲು ಮಲಗುವಾಗಲೂ ಸೊಳ್ಳೆ ಪರದೆಗಳನ್ನು ಕಟ್ಟಿಕೊಂಡು ಮಲಗುವುದು,ಮೈತುಂಬ ಬಟ್ಟೆ ಧರಿಸುವುದು, ಮಸ್ಕಿಟೋ ಕಾಯಿಲ್, ಕ್ರೀಮ್ ಗಳನ್ನು ಬಳಸಿ ಸ್ವಯಂ ರಕ್ಷಣೆ ಮಾಡಿಕೊಳ್ಳುವುದು,ಸಂಜೆ ವೇಳೆ ಬಾಗಿಲು ಕಿಟಿಕಿಗಳಿಗೆ ಕರ್ಟನ್ ಹಾಕುವುದನ್ನು ಮನವರಿಕೆ ಮಾಡಬೇಕು, ಯಾರಿಗಾದರೂ ಕೀಲು ನೋವು, ಜ್ವರ, ವಾಂತಿ,ತಲೆ ನೋವು, ಇತ್ಯಾದಿ ಕಂಡು ಬಂದರೆ ಆಸ್ಪತ್ರೆಗೆ ಕಳಿಸಿ, ಅಲ್ಲಿ ರಕ್ತ ಪರೀಕ್ಷೆ ಮಾಡುವರು, ಮತ್ತು ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುವುದರಿಂದ ಡೆಂಗೀ ತಡೆಗಟ್ಟಬಹುದು, ಡೆಂಗೀ ಮುಕ್ತ ರಾಷ್ಟ್ರ ರೂಪಿಸಲು ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸುವಂತೆ ಸಾರ್ವಜನಿಕರಿಗೆ ತಿಳಿಸಬೇಕೆಂದು ಅವರು ಮನವಿ ಮಾಡುತ್ತಾ, ಜನರಿಗೆ ಮಾಹಿತಿ ನೀಡುವ ಉಪಯುಕ್ತ ಕರಪತ್ರಗಳನ್ನು ಆಶಾ ಕಾರ್ಯಕರ್ತೆಯರಿಗೆ ವಿತರಣೆ ಮಾಡಿದರು,
 ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆಶಾ ಫೆಸಿಲಿಟೇಟರ್ ಬಸಮ್ಮ, ಮತ್ತು ಶಹೀರಾಬಾನು, ಆಶಾ ಕಾರ್ಯಕರ್ತೆಯರಾದ ಜಲಜಾಕ್ಷಿ, ಹನುಮಂತಮ್ಮ, ಎರ್ರಮ್ಮ,ಶಾಂತಮ್ಮ,ಆಶಾ, ವಿಜಯಶಾಂತಿ, ಪದ್ಮಾ, ವಿಜಯಲಕ್ಷ್ಮಿ, ಮಂಜುಳಾ, ಅನಸೂಯ, ಮೇಘನಾ, ಭಾಗ್ಯಮ್ಮ, ಲಕ್ಷ್ಮಿ, ಪಕ್ಕಿರಮ್ಮ, ಶಿವಲೀಲ, ರಾಜೇಶ್ವರಿ, ಶಂಶೂನ್ ಬಾನು,ನೀಲಮ್ಮ, ಸವಿತಾ, ಮಂಗಳಾ, ಸಾವಿತ್ರಿ ಇತರರು ಹಾಜರಿದ್ದರು