‘ಮಾಯೆ ಅಂಡ್ ಕಂಪನಿ’ ಬಿಡುಗಡೆ: ಅಭಿಮಾನಿಗಳಿಂದ ಅನ್ನ ದಾಸೋಹ

ಬೀದರ್: ಫೆ.10:ನಟ ಅರ್ಜುನ ಕಿಶೋರ ನಟನೆಯ ‘ಮಾಯೆ ಅಂಡ್ ಕಂಪನಿ’ ಕನ್ನಡ ಚಲನಚಿತ್ರ ಬಿಡುಗಡೆ ಪ್ರಯುಕ್ತ ಅಭಿಮಾನಿಗಳು ನಗರದಲ್ಲಿ ಶುಕ್ರವಾರ ಅನ್ನ ದಾಸೋಹ ಮಾಡಿದರು.
ಹಣ್ಮುಪಾಜಿ ಗೆಳೆಯರ ಬಳಗದ ನೇತೃತ್ವದಲ್ಲಿ ಬ್ರಿಮ್ಸ್ ಆಸ್ಪತ್ರೆ ಆವರಣದಲ್ಲಿ ರೋಗಿಗಳು ಹಾಗೂ ಸಾರ್ವಜನಿಕರಿಗೆ ಅನ್ನ ಪ್ರಸಾದ ವಿತರಿಸಿದರು.
ಮಾಯೆ ಅಂಡ್ ಕಂಪನಿ ಅರ್ಜುನ ಕಿಶೋರ ಅವರ ನಾಲ್ಕನೇ ಚಿತ್ರವಾಗಿದೆ. ಪ್ರೇಕ್ಷಕರು ವೀಕ್ಷಿಸಿ ಪೆÇ್ರೀತ್ಸಾಹಿಸಬೇಕು ಎಂದು ಜಿಲ್ಲೆಯವರೇ ಆದ ಚಿತ್ರನಟ ಹಣ್ಮುಪಾಜಿ ಮನವಿ ಮಾಡಿದರು.
ಪ್ರಮುಖರಾದ ಅಭಿಷೇಕ ಮಠಪತಿ, ಓಂ ಕೌಠೆ, ನಾಮದೇವ ಸೊಳಂಕೆ, ಅಭಿಷೇಕ, ದತ್ತು ಸೊಳಂಕೆ, ಶಿವು ಸ್ವಾಮಿ, ಸಂಗಮೇಶ, ಕಿರಣ, ಅವಿನಾಶ ಭಾಲ್ಕೆ, ಧನರಾಜ ಮೊದಲಾದವರು ಇದ್ದರು.